ತುಂಬಿದ ಕಾರಂಜಾ; 11 ಸಾವಿರ ಕ್ಯುಸೆಕ್ ನೀರು ನದಿಗೆ
ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಸಮೀಪದ ಕಾರಂಜಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಅಣೆಕಟ್ಟೆಯ ನೀರಿನ ಸಂಗ್ರಹ ಸಾಮರ್ಥ್ಯ 7.69 ಟಿಎಂಸಿ ಅಡಿ ಇದೆ. ಶುಕ್ರವಾರ 10 ಸಾವಿರ ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 11 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಗುರುವಾರ 13 ಸಾವಿರ ಕ್ಯುಸೆಕ್ ಒಳಹರಿವು ಇದ್ದ ಕಾರಣ ಜಲಾಶಯದ ಎಲ್ಲ ಆರು ಕ್ರಸ್ಟ್‌ಗೇಟ್ ತೆರೆದು ಶುಕ್ರವಾರ ಬೆಳಗಿನ ವರೆಗೆ ನೀರು ಹರಿಸಲಾಗಿದೆ. ಮಧ್ಯಾಹ್ನದ ನಂತರ 4 ಕ್ರಸ್ಟ್‌ಗೇಟ್‌ಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆಯ ಎಇಇ ವಿಘ್ನೇಶ್ವರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.