ಬೀದರ್‌ನ ಕೃಷಿ ಕಾಲೊನಿ ವಿವೇಕಾನಂದ ಕಾಲೊನಿಯ ನಿವಾಸಿಗಳು ಮೈಲೂರ–ಗುಂಪಾ ರಿಂಗ್‌ರೋಡ್‌ನಲ್ಲಿ ಭಾನುವಾರ ರಸ್ತೆ ತಡೆ ನಡೆಸಿದರು
15 ದಿನಗಳ ಗಡುವು
ಮೌನೇಶ್ವರ ರಸ್ತೆಯಿಂದ ಮನ್ನಳ್ಳಿ ರಸ್ತೆಯ ವರೆಗೆ ಜ್ಞಾನಗಂಗಾ ಫಾರ್ಮಸಿ ಕಾಲೇಜಿನ ರಸ್ತೆ ಕೃಷಿ ಕಾಲೊನಿಯ ಉದ್ಯಾನವನ್ನು 15 ದಿನಗಳ ಒಳಗೆ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ 15 ದಿನಗಳ ನಂತರ ಮನ್ನಳ್ಳಿ ಮುಖ್ಯರಸ್ತೆಯಲ್ಲಿರುವ ಗುಂಪಾ ರಿಂಗ್‌ರೋಡ್‌ನಲ್ಲಿ ರಸ್ತೆತಡೆ ಚಳವಳಿ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ರಸ್ತೆ ಅತಿಕ್ರಮಣ ತೆರವು
ಪ್ರತಿಭಟನಾ ಸ್ಥಳಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿದ ನಂತರ ಮೌನೇಶ್ವರ ದೇವಸ್ಥಾನ ಕೃಷಿ ಕಾಲೊನಿ ವಿವೇಕಾನಂದ ಕಾಲೊನಿಯಲ್ಲಿನ ರಸ್ತೆ ಅತಿಕ್ರಮಣ ಅವೈಜ್ಞಾನಿಕ ಹಂಪ್ಸ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ರಸ್ತೆಗಳಿಗೆ ಹಂಪ್ಸ್‌ಗಳನ್ನು ಹಾಕುವ ಅಧಿಕಾರ ಲೋಕೋಪಯೋಗಿ ಇಲಾಖೆ ಮಹಾನಗರ ಪಾಲಿಕೆಗೆ ಇದೆ. ಸಾರ್ವಜನಿಕರು ಹಂಪ್ಸ್‌ಗಳನ್ನು ಹಾಕುವಂತಿಲ್ಲ. ಈಗಾಗಲೇ ಹಾಕಿದ್ದ ಹಂಪ್ಸ್ ತೆರವುಗೊಳಿಸಿದ್ದು ಹಾಕಿದವರಿಗೆ ನೋಟಿಸ್ ನೀಡಲಾಗುವುದು. ಮೌನೇಶ್ವರ ರಸ್ತೆ ದುರಸ್ತಿ ಕೃಷಿ ಕಾಲೊನಿಯ ಉದ್ಯಾನವನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪಾಲಿಕೆಯ ಎಇಇ ನಾಗನಾಥ ತಿಳಿಸಿದರು.