ಮಂಗಳವಾರ, ಏಪ್ರಿಲ್ 20, 2021
25 °C
From Bidar on July 11 Special train to Pandharpur

ಜುಲೈ 11ರಿಂದ ಬೀದರ್‌ನಿಂದ ಪಂಢರಪುರಕ್ಕೆ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಆಷಾಢ ಏಕಾದಶಿ ಪ್ರಯುಕ್ತ ಮಹಾರಾಷ್ಟ್ರದ ಪಂಢರಪುರದ ಪಂಢರಿನಾಥನ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬೀದರ್‌ನಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಜುಲೈ 11 ರಂದು ಮಧ್ಯಾಹ್ನ 3.45ಕ್ಕೆ ಬೀದರ್‌ನಿಂದ ಹೊರಡುವ 07517 ಸಂಖ್ಯೆಯ ರೈಲು ಭಾಲ್ಕಿ, ಕಮಲನಗರ, ಉದಗಿರ್‌, ಲಾತೂರ್‌ ರೋಡ್‌, ಲಾತೂರ್, ಉಸ್ಮಾನಾಬಾದ್‌ ಮತ್ತು ಕುರ್ಡವಾಡಿ ಮಾರ್ಗವಾಗಿ ರಾತ್ರಿ 11.30ಕ್ಕೆ ಪಂಢರಪುರಕ್ಕೆ ತಲುಪಲಿದೆ.

ಜುಲೈ 12 ರಂದು ಬೀದರ್‌ನಿಂದ ಇದೇ ಮಾರ್ಗವಾಗಿ ಹೊರಡುವ 07522 ಸಂಖ್ಯೆಯ ಮತ್ತೊಂದು ರೈಲು ರಾತ್ರಿ 11.30ಕ್ಕೆ ಪಂಢರಪುರಕ್ಕೆ ತಲುಪಲಿದೆ. ಜುಲೈ 13 ರಂದು ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ಹೊರಡುವ 07520 ಸಂಖ್ಯೆಯ ರೈಲು ಕೂಡ ಇದೇ ಮಾರ್ಗವಾಗಿ ರಾತ್ರಿ 10.10ಕ್ಕೆ ಪಂಢರಪುರ ಮುಟ್ಟಲಿದೆ.

ಪಂಢರಪುರದಿಂದ ಜುಲೈ 12 ರಂದು ಬೆಳಿಗ್ಗೆ 5.30ಕ್ಕೆ ಹೊರಡುವ 07521 ಸಂಖ್ಯೆಯ ರೈಲು ಕುರ್ಡವಾಡಿ, ಬಾರ್ಸಿ ಟೌನ್‌, ಉಸ್ಮಾನಾಬಾದ್‌, ಲಾತೂರ್, ಲಾತೂರ್ ರೋಡ, ಉದಗಿರ್, ಕಮಲನಗರ ಹಾಗೂ ಭಾಲ್ಕಿ ಮಾರ್ಗವಾಗಿ ಮಧ್ಯಾಹ್ನ 1.20ಕ್ಕೆ ಬೀದರ್‌ಗೆ ಬರಲಿದೆ.

ಅದೇ ದಿನ ಮಧ್ಯಾಹ್ನ 12 ಗಂಟೆಗೆ ಪಂಢರಪುರದಿಂದ ಬಿಡುವ 07519 ಸಂಖ್ಯೆಯ ಇನ್ನೊಂದು ರೈಲು ಕುರ್ಡವಾಡಿ, ಉಸ್ಮಾನಾಬಾದ್‌, ಲಾತೂರ್, ಲಾತೂರ್ ರೋಡ್‌, ಉದಗಿರ್, ಕಮಲನಗರ ಹಾಗೂ ಭಾಲ್ಕಿ ಮಾರ್ಗವಾಗಿ ಸಂಜೆ 7.15ಕ್ಕೆ ಬೀದರ್‌ಗೆ ತಲುಪಲಿದೆ.

ಪಂಢರಪುರದಿಂದ ಜುಲೈ 13 ರಂದು ಬೆಳಿಗ್ಗೆ 5.30ಕ್ಕೆ ಹೊರಡುವ 07518 ಸಂಖ್ಯೆಯ ರೈಲು, ಕುರ್ಡವಾಡಿ, ಉಸ್ಮಾನಾಬಾದ್‌, ಲಾತೂರ್‌, ಲಾತೂರ್ ರೋಡ್‌, ಉದಗಿರ್, ಕಮಲನಗರ ಮತ್ತು ಭಾಲ್ಕಿ ಮಾರ್ಗವಾಗಿ ಮಧ್ಯಾಹ್ನ 1.20ಕ್ಕೆ ಬೀದರ್‌ಗೆ ಬರಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.