ಬುಧವಾರ, ಜೂಲೈ 8, 2020
28 °C
ವೈರಾಣು ಪೀಡಿತರ ಸಂಖ್ಯೆ 175ಕ್ಕೆ ಏರಿಕೆ

ಮತ್ತೆ 10 ಜನರಿಗೆ ಕೋವಿಡ್ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಜಿಲ್ಲೆಯಲ್ಲಿ ಮಂಗಳವಾರ 10 ಜನರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 175ಕ್ಕೆ ಏರಿದೆ.

ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆಯಿಂದ ಬೀದರ್‌ ಜಿಲ್ಲೆಗೆ ಮರಳಿ ಕ್ವಾರಂಟೈನ್‌ನಲ್ಲಿ ಇದ್ದ 53, 31, 35, 44, 38, 26 ಹಾಗೂ 20 ಪುರುಷ, 32, 29 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕಿಯ ಗಂಟಲು ದ್ರವ ಮಾದರಿ ಪಡೆದು ಕಲಬುರ್ಗಿಯ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಮಂಗಳವಾರ ಇವರೆಲ್ಲರ ವರದಿ ಪಾಸಿಟಿವ್‌ ಬಂದಿದೆ.

ಜಿಲ್ಲಾ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿದ್ದ 41 ಜನರು ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.