ಹುಲಸೂರ: ಹವಾಮಾನ ಬದಲಾವಣೆ ಮತ್ತು ನಿರಂತರ ಮಳೆಯ ಪರಿಣಾಮವಾಗಿ ರೈತರ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗಿದ್ದು ಇನ್ನೂ ಸಮಗ್ರ ಸಮೀಕ್ಷೆ ಮಾಡಿ, ಅಂತಿಮ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ಹಾನಿಗೀಡಾದ ರೈತರ ಸಂಕಷ್ಟಕ್ಕೆ, ನೆರವಿಗೆ ನಾನಿದ್ದೇನೆ, ಸರ್ಕಾರವೂ ಇದೆ. ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ, ಸಾಯಗಾಂವ, ಹಲಸಿ ತುಗಾಂವ, ವಾಂಝರಖೇಡ ಗ್ರಾಮದ ಅತಿವೃಷ್ಟಿಯಿಂದ ಬೆಳೆಹಾನಿಯಾದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಅಹವಾಲು ಆಲಿಸಿದರು.

ಹೊಲಗಳಲ್ಲಿ ಹೆಸರು, ಉದ್ದು, ಸೊಯಾಬೀನ್, ತೊಗರಿ ಬೆಳೆಗಳು ಅಧಿಕ ಮಳೆಯಿಂದ ಹಾಳಾದ ದೃಶ್ಯವನ್ನು ಕಂಡ ಸಚಿವರು, ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಲೆ ತಗ್ಗು ಪ್ರದೇಶದಲ್ಲಿರುವ ಬೆಳೆಗಳು ಹಾನಿಯಾದ ಕುರಿತು ಮಾಹಿತಿ ಪಡೆದರು.

ರೈತರ ಮನವಿ: ‘ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ಬೆಳೆಗಳು, ಗ್ರಾಮೀಣ ಭಾಗದ ಸೇತುವೆ, ರಸ್ತೆ, ಮನೆ ಹಾಗೂ ಹೊಲಕ್ಕೆ ಹೋಗುವ ದಾರಿ ಹಾನಿಯಾಗಿವೆ. ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದ್ದೇವೆ. ಇನ್ನೂ ಮಳೆ ನಿಂತಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ಹಾನಿ ಸಂಭವಿಸಲಿದೆ. ಅದನ್ನು ಕೂಡ ಅಧಿಕಾರಿಗಳು ಪರಿಗಣಿಸಬೇಕು’ ಎಂದು ರೈತರು ಮನವಿ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ಸಚಿವ ಖಂಡ್ರೆ, ‘ಅಧಿಕಾರಿಗಳು ಕೊಟ್ಟ ಮಾಹಿತಿಯಂತೆ ಈವರೆಗೂ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಶೇ 90ರಷ್ಟು ಬೆಳೆ ಹಾನಿಗೀಡಾಗಿದೆ. ಹಾನಿಯ ಬಗ್ಗೆ ಸರಿಯಾಗಿ ಅಪ್ಲೋಡ್ ಮಾಡಬೇಕು’ ಎಂದು ಸ್ಥಳದಲ್ಲಿದ್ದ ಕಂದಾಯ, ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

‘ಈಗಾಗಲೇ ಅಧಿಕಾರಿಗಳಿಗೆ ಹಾನಿಯಾದ ಪ್ರತಿ ಎಕರೆಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಹೆಚ್ಚುವರಿ ₹8,500 ಪರಿಹಾರ ಸೇರಿದಂತೆ ಒಟ್ಟು ₹17,000 ಖುಷ್ಕಿ ಜಮೀನಿಗೆ, ₹25,000 ನೀರಾವರಿ ಜಮೀನಿಗೆ ಹಾಗೂ ₹31,000 ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ಒದಗಿಸಲಾಗುವುದು. ಪರಿಹಾರ ಹಣವನ್ನು ದೀಪಾವಳಿ ಹಬ್ಬಕ್ಕೂ ಮೊದಲೇ ರೈತರ ಖಾತೆಗೆ ಜಮಾ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಕೊಂಗಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಸೇತುವೆ ಹಾಳಾಗಿದ್ದು ಅಂದಾಜು ₹2 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶೀಘ್ರ ಅನುದಾನ ನೀಡಲಾಗುವುದು ಹಾಗೂ ವಾಂಝರಖೇಡ ಗ್ರಾಮದ ರೈತರಿಗೆ ನೂತನ ಸೇತುವೆ ಮತ್ತು ಗ್ರಾಮೀಣ ಭಾಗದ ಹಳ್ಳಿಗಳಲ್ಲಿನ ಹಾಳಾದ ರಸ್ತೆ, ಸೇತುವೆ ಮೇಲ್ದರ್ಜೆಗೇರಿಸಿ ಕೂಡಲೇ ದುರಸ್ತಿ ಮಾಡಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ ಬದೊಲೆ, ಉಪವಿಭಾಗಾಧಿಕಾರಿ ಮುಕುಲ್ ಜೈನ, ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರೆ, ಶಿವಾನಂದ ಮೇತ್ರೆ, ತಾಲ್ಲೂಕು ಪಂಚಾಯಿತಿ ಇಒ ಸೂರ್ಯಕಾಂತ ಬಿರಾದಾರ, ಮಹದೇವ ಜಮ್ಮು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.