ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಡ್ರ್ಯಾಗನ್ ಫ್ರೂಟ್: ಲಾಭದ ನಿರೀಕ್ಷೆಯಲ್ಲಿ ರೈತ

ಒಂದು ಎಕರೆಯಲ್ಲಿ 2,000 ಸಸಿ ನಾಟಿ ಮಾಡಿರುವ ರಾಚಪ್ಪ ಗೌಡಗಾಂವ ಗ್ರಾಮದ ಅನಂತರಾವ ಪಾಟೀಲ
Published 16 ಜುಲೈ 2023, 5:45 IST
Last Updated 16 ಜುಲೈ 2023, 5:45 IST
ಅಕ್ಷರ ಗಾತ್ರ

ಗುರುಪ್ರಸಾದ ಮೆಂಟೆ

ಹುಲಸೂರ: ತಾಲ್ಲೂಕಿನ ರಾಚಪ್ಪ ಗೌಡಗಾಂವ ಗ್ರಾಮದ ರೈತ ಅನಂತರಾವ ಪಾಟೀಲ ತಮ್ಮ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಯೂಟ್ಯೂಬ್‌ನಲ್ಲಿ ಮಾಹಿತಿ ಪಡೆದು ತೆಲಂಗಾಣದ ಸಂಗಾರೆಡ್ಡಿಯಿಂದ ಗುಲಾಬಿ ಬಣ್ಣದ ಕಾಯಿ ಬಿಡುವ ಸಸಿ ತಂದು ಒಂದು ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಈಗ ಗಿಡಗಳು ಹಣ್ಣು ಬಿಟ್ಟಿವೆ.

‘ಇದು ಕಳ್ಳಿ ಸಸ್ಯಗಳ ಜಾತಿಗೆ ಸೇರಿದೆ. ಒಮ್ಮೆ ನೆಟ್ಟರೆ ಸಾಯುವುದಿಲ್ಲ. ಸಸಿ ನಾಟಿ ಮಾಡುವಾಗ ಮಾತ್ರ ಹೆಚ್ಚು ಖರ್ಚು ತಗಲುತ್ತದೆ. ಮೊದಲು ಸಿಮೆಂಟ್ ಕಂಬಗಳನ್ನು ನೆಡಬೇಕು. ಒಂದು ಎಕರೆಗೆ 500 ಕಂಬಗಳನ್ನು ಹಾಕಬಹುದು. ಬಳಿಕ ಅವುಗಳ ಬಳಿ ಸಸಿ ನಾಟಿ ಮಾಡಬೇಕು. ಒಂದು ಕಂಬಕ್ಕೆ ನಾಲ್ಕು ಸಸಿಗಳಂತೆ ಒಟ್ಟು 2,000 ಸಸಿ ನಾಟಿ ಮಾಡಬಹು ದು. ಇವುಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸಲಾಗುತ್ತದೆ’ ಎಂದು ತಿಳಿಸುತ್ತಾರೆ ರೈತ ಅನಂತರಾವ ಪಾಟೀಲ.

1 ಎಕರೆಗೆ ₹5 ಲಕ್ಷ ಖರ್ಚು ಬರುತ್ತದೆ. ಒಂದು ಬಾರಿ ವೆಚ್ಚ ಮಾಡಿದರೆ ಸತತ 20 ವರ್ಷ ಲಾಭ ಪಡೆಯಬಹುದು. ಸಸಿ ನಾಟಿ ಮಾಡಿದ ನಂತರ ಒಂದು ವರ್ಷಕ್ಕೆ ಫಸಲು ಬರುತ್ತದೆ ಎಂದು ಹೇಳಿದರು.

ಸದ್ಯ ಹುಮನಾಬಾದ್, ಬಸವಕಲ್ಯಾಣ ಹಾಗೂ ಹುಲಸೂರಿನ ಮಾರುಕಟ್ಟೆಯಲ್ಲಿ 1 ಕೆ.ಜಿ ಹಣ್ಣಿಗೆ ₹200 ಇದೆ. ಇದರಿಂದ ಮೊದಲನೆ ವರ್ಷ ₹3 ಲಕ್ಷ ಲಾಭ ಬಂದಿದೆ. ಇನ್ನೂ ₹5 ಲಕ್ಷ ಲಾಭ ಆಗಬಹುದು ಎನ್ನುತ್ತಾರೆ ಅವರು.

ಮಾಹಿತಿಗಾಗಿ ಅನಂತರಾವ್ ಪಾಟೀಲ ಅವರ ಮೊ.ಸಂ: 6362139273 ಸಂಪರ್ಕಿಸಬಹುದು.

ಅವಿನಾಶ
ಅವಿನಾಶ
ರೈತ ಅನಂತರಾವ ಪಾಟೀಲ ಅವರು ಭಾಲ್ಕಿ ಮತ್ತು ಹುಲಸೂರ ತಾಲ್ಲೂಕುಗಳಲ್ಲಿಯೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇಲಾಖೆಯಿಂದ ಸಹಾಯಧನ ನೀಡಲಾಗುವುದು
–ಅವಿನಾಶ, ಸಹಾಯಕ ತೋಟಗಾರಿಕೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT