ಗುರುವಾರ , ಸೆಪ್ಟೆಂಬರ್ 23, 2021
24 °C

ಜನಪದ ದೇವರು ಕೊಟ್ಟ ವರ: ಉಪನ್ಯಾಸಕರ ಸಂಘದ ಅಧ್ಯಕ್ಷ ಓಕಾಂತ ಸೂರ್ಯವಂಶಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜನಪದ ದೇವರು ಕೊಟ್ಟ ವರವಾಗಿದೆ ಎಂದು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ನುಡಿದರು.

ಮಹಾತ್ಮ ಗಾಂಧಿ ಮಿತ್ರ ಮಂಡಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ನಗರ ಘಟಕದ ವತಿಯಿಂದ ನಗರದ ರಾಂಪುರೆ ಕಾಲೊನಿಯ ಬಸವರಾಜ ಹೆಗ್ಗೆ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಜನರು ಜನಪದ ಔಷಧಿಯನ್ನೇ ಬಳಸಿದರು. ಹೀಗಾಗಿ ನಾವು ಎಷ್ಟೇ ಮುಂದುವರಿದರೂ ಜನಪದ ಬೇಕೇ ಬೇಕು ಎಂದು ಹೇಳಿದರು.

ಜನಪದ ಸಾಹಿತ್ಯ ಸಿಂಧು ನಾಗರಿಕತೆಯಿಂದ ಬಂದಿದೆ. ಆಗ ಜನ ಹಾಡುವುದು, ನೃತ್ಯ ಮಾಡುವುದನ್ನು ಮಾತ್ರ ಮಾಡುತ್ತಿದ್ದರು. ನಂತರ ಹಾಡುಗಳು ಅಕ್ಷರ ರೂಪ ಪಡೆದುಕೊಂಡವು. ಶರಣರ ವಚನಗಳ ರಚನೆಗೆ ಜನಪದ ಸಂಸ್ಕøತಿಯೇ ಮೂಲವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜನಪದ ಸಂಸ್ಕøತಿಗೆ ಉತ್ತೇಜನ ನೀಡಲು ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ಬೀದರ್‍ನಲ್ಲಿ ಸಾಂಸ್ಕøತಿಕ ಹಬ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಭಾಗದ ಜನಪದ ಕಲಾವಿದರು ಹಾಗೂ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವುದು ತಮ್ಮ ಬಯಕೆಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಉಪನ್ಯಾಸಕಿ ರೇಣುಕಾ ಪೂಜಾರಿ ಮಾತನಾಡಿ, ಜನಪದ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ನುಡಿದರು.

ಹಿಂದೆ ಮಹಿಳೆಯರು ಯಾವುದೇ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆಯದಿದ್ದರೂ, ಸಾವಿರಾರು ಹಾಡುಗಳನ್ನು ಹಾಡುತ್ತಿದ್ದರು. ಕುಟ್ಟುವ, ಬೀಸುವ, ಸೀಮಂತ, ಸೋಬಾನೆ, ತೊಟ್ಟಿಲು, ಜೋಗುಳ, ಸೀಗಿ, ಬುಲಾಯಿ ಪದಗಳು ಅವರ ನಾಲಿಗೆ ತುದಿ ಮೇಲೆ ನಲಿದಾಡುತ್ತಿದ್ದವು ಎಂದು ಹೇಳಿದರು.

ಪರಿಷತ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಜನಪದ ಜೀವನ ಪದ್ಧತಿ ಮೈಗೂಡಿಸಿಕೊಂಡರೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹೇಳಿದರು.

ಪನ್ನಾಲಾಲ್ ಹೀರಾಲಾಲ್ ಕಾಲೇಜು ಪ್ರಾಚಾರ್ಯ ಬಸವರಾಜ ಬುಳ್ಳಾ, ಚಿಟಗುಪ್ಪ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಮಾರುತಿ ರೆಡ್ಡಿ, ಶಿವಶಂಕರ ಬಾಮಂದಿ, ರಮೇಶ ಪಾಟೀಲ, ಮಹಾರುದ್ರ ಪೂಜಾರಿ, ಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಂತೋಷಿ ಬಿ. ಹೆಗ್ಗೆ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಧನರಾಜ ಆನೆಕಲೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು