ಲಾರಿ ಹಾಯ್ದು ನಾಲ್ಕು ಆಡುಗಳ ಸಾವು
ಜನವಾಡ: ಬೀದರ್ ತಾಲ್ಲೂಕಿನ ಕಾಡವಾದ ಸಮೀಪ ಸೋಮವಾರ ಬೆಳಿಗ್ಗೆ ಲಾರಿ ಅಡಿ ಸಿಲುಕಿ ನಾಲ್ಕು ಆಡುಗಳು ಮೃತಪಟ್ಟಿವೆ.
ಮನ್ನಾಎಖ್ಖೆಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಹಾಯ್ದು ರಸ್ತೆ ದಾಟುತ್ತಿದ್ದ ಆಡುಗಳು ಸ್ಥಳದಲ್ಲೇ ಮೃತಪಟ್ಟಿವೆ. ಆಡುಗಳು ಕಬ್ಬು ಕಟಾವು ಮಾಡುವ ವಲಸೆ ಕಾರ್ಮಿಕರಿಗೆ ಸೇರಿವೆ. ಅವುಗಳ ಒಟ್ಟು ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.
ಘಟನೆ ನಂತರವೂ ನಿಲ್ಲಿಸದೆ ಹೋಗುತ್ತಿದ್ದ ಲಾರಿಯನ್ನು ಗ್ರಾಮದ ಯುವಕರು ಬೆನ್ನಟ್ಟಿ ಹಿಡಿದಿದ್ದಾರೆ. ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.