ಬೀದರ್: ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಆಸ್ಪತ್ರೆ ಅಧ್ಯಕ್ಷ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಮಾತನಾಡಿ, ಸಹಕಾರ ಕ್ಷೇತ್ರದ ಮೊದಲ ಆಸ್ಪತ್ರೆ ಇದಾಗಿದೆ. ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಇದನ್ನುಕಟ್ಟಿ ಬೆಳೆಸಿದ್ದು, ಅವರ ಆಶಯದಂತೆ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಆಸ್ಪತ್ರೆಯ ಷೇರುದಾರ ಕುಟುಂಬದ ಸದಸ್ಯರಿಗೆ ಪ್ರತಿ ತಿಂಗಳಲ್ಲಿ ಎರಡು ಭಾನುವಾರಗಳಂದು ಉಚಿತ ಒಪಿಡಿ ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 350 ಹಾಸಿಗೆಯ ಆಸ್ಪತ್ರೆಯೊಂದಿಗೆ ಮೆಡಿಕಲ್ ಕಾಲೇಜ ಸ್ಥಾಪಿಸಬೇಕೆಂಬ ಕನಸು ಇಟ್ಟುಕೊಂಡು ಭಾಲ್ಕಿ ರಸ್ತೆಯ ಲಾಲಬಾಗ್ ಸಮೀಪ 70 ಎಕರೆ 18 ಗುಂಟೆ ಜಮೀನಿನ ಖರೀದಿಸಲಾಗಿದ್ದು, ಅದರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಷೇರುದಾರರಿಗೆ ಶೇ 10 ರಿಂದ 20ರ ವರಗೆ ರಿಯಾಯಿತಿ. ಹಿರಿಯ ನಾಗರಿಕರಿಗೆ ಶೇ 10 ರಿಯಾಯತಿ, ಆಡಳಿತ ಮಂಡಳಿ ಸದಸ್ಯರಿಗೆ ಶೇ 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಿರ್ದೇಶಕರಾದ ಸೂರ್ಯಕಾಂತ ನಾಗಮಾರಪಳ್ಳಿ, ಭೀಮರಾವ್ ಪಾಟೀಲ್, ಸಿದ್ರಾಮ ಡಿ.ಕೆ., ಡಾ. ಚಂದ್ರಕಾಂತ ಗುದಗೆ, ಡಾ.ವಿಜಯಕುಮಾರ ಕೋಟೆ, ಡಾ. ರಜನೀಶ ವಾಲಿ, ರಾಜೇಶ್ವರ ನಿಟ್ಟೂರೆ, ಅಶೋಕ ರೇಜಂತಲ್, ರಾಮದಾಸ ಮುಖೇಡಕರ್, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ರಾಜಕುಮಾರ ಹೂಗಾರ್, ಸಂತೋಷಕುಮಾರ ತಾಳಂಪಳ್ಳಿ, ಆಕಾಶ ವಿಜಯಕುಮಾರ ನಾಗಮಾರಪಳ್ಳಿ, ಸೈಯದ್ ಖಿಜರುಲ್ಲಾ ಹುಸೇನಿ, ರಾಚಪ್ಪ ಬಸವಣ್ಣಪ್ಪ ಪಾಟೀಲ್, ಸಂಜೀಕುಮಾರ ಸಿದ್ದಾಪುರ, ನರಸಾರೆಡ್ಡಿ ಗುಂಡುರೆಡ್ಡಿ, ಶಿವಕುಮಾರ ಕಾಶಿನಾಥ ಭಾಲ್ಕೆ, ಗೋವಿಂದ ವಿಶ್ವನಾಥ, ರಾಘವೇಂದ್ರ ಭಗವಾನರಾವ್, ಸಿಇಒ ಎನ್. ಕೃಷ್ಣಾರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.