ಶನಿವಾರ, ಮೇ 8, 2021
24 °C

₹1 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ಮಾಡಗೂಳ ಗ್ರಾಮದ ಹೊರ ವಲಯದಲ್ಲಿ ಗ್ರಾಮದ ಸಂತೋಷಕುಮಾರ ಅಮೃತ ಎಂಬುವರ ಜಮೀನಿನಲ್ಲಿ ಬೆಳೆದ ₹1 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ.

‘ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿದಾಗ ಕಟಾವು ಮಾಡಲಾದ ಜೋಳದ ಬೆಳೆ ಮಧ್ಯದಲ್ಲಿ ಅಕ್ರಮವಾಗಿ 62 ಗಾಂಜಾ ಸಸಿಗಳು ಸಾಗುವಳಿ ಮಾಡಿರುವುದು ಪತ್ತೆಯಾಗಿದೆ. ಒಟ್ಟು 51 ಕೆ.ಜಿ ತೂಕದ ಗಾಂಜಾ ಗಿಡಗಳು ವಶಕ್ಕೆ ಪಡೆಯಲಾಗಿದೆ’ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ರಾಮ್ ರಾಠೋಡ್, ಇನ್‌ಸ್ಪೆಕ್ಟರ್‌ಗಳಾದ ಮಹೇಶ್ ಧೂಳಪ್ಪನವರ್, ನಿಂಗರೆಡ್ಡಿ, ಪ್ರವೀಣ್ ರಂಗಸುಬ್ಬೆ, ಸಂಜಯ ಅಸ್ಕಿ, ಸಬ್‌ ಇನ್‌ಸ್ಪೆಕ್ಟರ್‌ ದಿಲೀಪ್ ಸಿಂಗ್ ಠಾಕೂರ್, ಸಿಬ್ಬಂದಿ ಶಿವರಾಮ ರೆಡ್ಡಿ, ವೀರಶೆಟ್ಟಿ, ಅನಿಲ್ ಕುಮಾರ, ಟೋನಿ ಸೆಡ್ರಿಕ್, ವಿಠಲ್, ಉಮೇಶ್, ವಿಷ್ಣು, ಅತೀಕ್ ಮತ್ತು ವೆಂಕಟೇಶ್ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.