ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುನಾನಕ ಜಯಂತಿ: ನಾಂದೇಡ್-ಬೀದರ್ ವಿಶೇಷ ರೈಲು

Last Updated 13 ನವೆಂಬರ್ 2021, 15:24 IST
ಅಕ್ಷರ ಗಾತ್ರ

ಬೀದರ್: ಗುರುನಾನಕ ಜಯಂತಿ ಪ್ರಯುಕ್ತ ನಾಂದೇಡ್‍ನಿಂದ ಬೀದರ್ ಹಾಗೂ ಬೀದರ್‌ನಿಂದ ನಾಂದೇಡ್‍ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ನ.19ರಂದು ಗುರುನಾನಕ ಜಯಂತಿ ಇದೆ. 18 ರಂದು ನಾಂದೇಡ್‍ನಿಂದ ಬೀದರ್(07505)ಗೆ ಹಾಗೂ 20 ರಂದು ಬೀದರ್‌ನಿಂದ ನಾಂದೇಡ್(07507)ಗೆ ವಿಶೇಷ ರೈಲು ಹೊರಡಲಿದೆ ಎಂದು ಹೇಳಿದ್ದಾರೆ.

ವಿಶೇಷ ರೈಲು 18 ರಂದು ಬೆಳಿಗ್ಗೆ 11.50ಕ್ಕೆ ನಾಂದೇಡ್‍ನಿಂದ ಹೊರಟು ಪೂರ್ಣಾ, ಪರಭಣಿ, ಪರಳಿ ವೈಜಿನಾಥ, ಪಣಗಾಂವ, ಲಾತೂರ್ ರೋಡ್, ಉದಗಿರ್, ಭಾಲ್ಕಿ ಮೂಲಕ ಸಂಜೆ 6.30ಕ್ಕೆ ಬೀದರ್ ತಲುಪಲಿದೆ. 20 ರಂದು ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡುವ ರೈಲು ರಾತ್ರಿ 8.40ಕ್ಕೆ ನಾಂದೇಡ್‍ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಬೀದರ್ ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾಗಿದೆ. ಗುರುನಾನಕ ಜಯಂತಿಗೆ ನಾಂದೇಡ್, ದೆಹಲಿಯಿಂದಲೂ ಭಕ್ತರು ಬೀದರ್‍ಗೆ ಭೇಟಿ ನೀಡುತ್ತಾರೆ. ಸಿಖ್ಖ ಸಮುದಾಯದ ಪ್ರಮುಖರ ಮನವಿ ಮೇರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT