ಖಟಕಚಿಂಚೋಳಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಶೇಷನಾಗ ಹಿಬಾರೆ ಮಾತನಾಡಿ, ‘ದಾನಗಳಲ್ಲಿ ರಕ್ತ ದಾನ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸುವುದಲ್ಲದೇ ಮಾನಸಿಕ ಒತ್ತಡ ನಿವಾರಣೆ ಹಾಗೂ ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು’ ಎಂದು ತಿಳಿಸಿದರು.

‘ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಹಾಗೂ ರಸ್ತೆ ಅಪಘಾತದ ಸಮಯದಲ್ಲಿ ರಕ್ತ ಅತೀ ಅವಶ್ಯಕವಾಗಿ ಬೇಕಾಗುವುದು. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜೀವಕುಮಾರ ಜವಾದೆ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ರಕ್ತ ಸಂಗ್ರಹಣಾ ಘಟಕದ ಶೃತಿ, ಎಚ್‌ಡಿಎಫ್‌ಸಿ ಬ್ಯಾಂಕ್ ಉಪ ವ್ಯವಸ್ಥಾಪಕ ಅಧಿಕಾರಿ ವೀರಶೆಟ್ಟಿ ಜಾಡರ್, ಪಂಚಾಯಿತಿ ಸದಸ್ಯರಾದ ಆನಂದ ರಟಕಲೆ, ರಾಜಕುಮಾರ ಚಿದ್ರಿ, ಪವನ, ರೇವಣಸಿದ್ಧ ಜಾಡರ್, ವಿಠ್ಠಲ ಗುನ್ನಾಳೆ, ಬಸವರಾಜ ನಿಣ್ಣಿ, ವಿನೋದರಡ್ಡಿ, ಸತೀಷ ಸಂಗೂಳಗೆ, ಉಮೇಶ ತೆಲಂಗ್, ಅನಿಲ ಜಾಧವ್, ಶಿವು ಚಿಲಶೆಟ್ಟಿ, ರಾಜಕುಮಾರ ಜಮಾದಾರ ಸೇರಿದಂತೆ ಸುಮಾರು 40 ಜನ ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.