ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

Published 6 ಏಪ್ರಿಲ್ 2024, 5:38 IST
Last Updated 6 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ಬೀದರ್‌: ನಗರದ ಶಹಾಗಂಜ್‌ನಲ್ಲಿರುವ ಕ್ರಾಂತಿ ಗಣೇಶ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಗಣೇಶ, ಶಿವಲಿಂಗ, ನಾಗದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಕಳಸಾರೋಹಣ ಮಾಡಲಾಯಿತು. ಬೆಳಿಗ್ಗೆ 5 ಕ್ಕೆ ಯಂತ್ರ ಮತ್ತು ಪ್ರಾಣ ಪ್ರತಿಷ್ಠಾಪನೆ ಹವನ, ಅಲಂಕಾರ ಮಹಾಪೂಜೆ ನಡೆಯಿತು. ಬೆಳಗ್ಗೆ 9.30ಕ್ಕೆ ಪೂರ್ಣಾಹುತಿ, ಮಹಾಮಂಗಳರಾತಿ ಕಾರ್ಯಕ್ರಮವನ್ನು ನರಸಿಂಹ ವಾಸುದೇವ ದೀಕ್ಷಿತ್ ನಡೆಸಿಕೊಟ್ಟರು. ಇದರೊಂದಿಗೆ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ತೆರೆ ಬಿತ್ತು.

ಮೊದಲ ದಿನ ಕಲಶ ಯಾತ್ರೆ, ಪ್ರತಿಷ್ಠಾ ಸಂಕಲ್ಪ, ಧಾನ್ಯಾಧಿವಾಸ, ದೇವತಾ ಹವನ, ಅಗ್ನಿ ಪ್ರತಿಷ್ಠಾ, ವಾಸ್ತುಹವನ, ನವಗ್ರಹ ಹವನ, ಜಲಾಧಿವಾದ ಸೇರಿದಂತೆ ಇತೆರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಎರಡನೇ ದಿನ ಶಾಂತಿಪಾಠ, ದೇವತಾ ಆಹ್ವಾನ ಪೂಜೆ, ದೇವತಾ ಶಯ್ಯಾಧಿವಾಸ, ವಾಸ್ತು ರ‍್ಯಾಯ ಹವನ, ಪ್ರಸಾದನ್ಯಾಸ ನಡೆಯಿತು.


ಕೊನೆಯ ದಿನದ ಸಮಾರಂಭದಲ್ಲಿ ಹುಡಗಿ ಕಟ್ಟಿಮನಿ ಹಿರೇಮಠದ ವಿರೂಪಾಕ್ಷ ದೇವರು, ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಪ್ರಮುಖರಾದ ನಂದಕಿಶೋರ ವರ್ಮಾ, ಈಶ್ವರ ಸಿಂಗ್ ಠಾಕೂರ್, ಬಾಬುರಾವ ಕಾಮಶೆಟ್ಟಿ, ಲಕ್ಷ್ಮಣರಾವ್‌ ಬೀದರಕರ್, ಸುಭಾಷ ವಾಘಮಾರೆ, ರಾಚಪ್ಪ ಪೋಲಕಪಳ್ಳಿ, ಸಂಗಮೇಶ ಪಾಟೀಲ ಮಳಚಾಪುರ, ಧನರಾಜ ಮಡಕಿ, ಸಂಜು ಕೆಂಚಾ, ಚಂದ್ರಕಾಂತ ಜೋಪಾಟೆ, ಶಶಿ ನಾಯಕ, ಸಂತೋಷ ಭಂಗೂರೆ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT