ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಕೊನೆ ದಿನ 13 ನಾಮಪತ್ರಗಳು ಸಲ್ಲಿಕೆ

Published 19 ಏಪ್ರಿಲ್ 2024, 16:09 IST
Last Updated 19 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ 13 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಪಕ್ಷೇತರರಾಗಿ ಜಯರಾಜ ಕಾಶಪ್ಪಾ ಬುಕ್ಕಾ, ಅಬ್ದುಲ್ ರಜಾಕ್, ಡಾ.ದಿನಕರ್‌ ಮೋರೆ, ಮಹೇಶ ಕುಮಾರ ಪ್ರಭಾಕರ್ ರಾವ್ ಗವಂಡೆ, ಕಲ್ಲಾಲಿಂಗ ಈಶ್ವರಪ್ಪ ಹೂಗಾರ, ಗೌತಮ ಮೋರೆ, ಪರಮೇಶ್ವರ ಪಾಟೀಲ, ಗೋಪಾಲ ಮಾರುತಿ, ರಾಮವಿಲಾಸ್ ನಾವಂದರ್ ಹಾಗೂ ಬಸಪ್ಪ ರಾಂಪೂರೆ ಅವರು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಪರವಾಗಿ ಅವರ ಸೂಚಿತ ವ್ಯಕ್ತಿ ಮಲ್ಲಿಕಾರ್ಜುನ ಪಾಟೀಲ ‌ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ಶಿವರಾಜ, ಆರ್.ಪಿ.ಐ.ಬಿ ಪಕ್ಷದಿಂದ ಲಕ್ಷ್ಮಿಪುತ್ರ ಮಾಳಗೆ ನಾಮಪತ್ರ ಸಲ್ಲಿಸಿದರು.

ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಏ. 12ರಿಂದ ಏ.19ರವರೆಗೆ ಒಟ್ಟು 34 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT