ಬೀದರ್: ಆಗಸದಲ್ಲಿ ಹಾರಾಡಬೇಕೆಂಬ ಕನಸು ನನಸಾದ ಸಂಭ್ರಮದಲ್ಲಿರುವ ಪೂಜಾ ಸದಾಂಗಿ, ಗಡಿ ಜಿಲ್ಲೆ ಬೀದರ್ನ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

200 ಗಂಟೆ ವಿಮಾನ ಹಾರಾಟದ ತರಬೇತಿ ಪೂರ್ಣಗೊಳಿಸಿರುವ ಅವರು, ಕಮರ್ಷಿಯಲ್ ಪೈಲಟ್ ಆಗಲು ಬೇಕಾದ ಅರ್ಹತೆ ಗಳಿಸಿ, ಏರ್ಲೈನ್ಸ್ ಸಂಸ್ಥೆ ಸೇರಲು ಕಾತುರರಾಗಿದ್ದಾರೆ.

ಹರಿಯಾಣದಲ್ಲಿ ದಿವಾನಿ ಎಫ್ಎಸ್ಟಿಸಿ ಫ್ಲೈಯಿಂಗ್ ಸ್ಕೂಲ್ನಲ್ಲಿ ಎರಡು ವರ್ಷಗಳ ಕಾಲ ಪೈಲಟ್ ತರಬೇತಿ ಪಡೆದಿರುವ ಪೂಜಾ ಅವರು, 200 ಗಂಟೆ ವಿಮಾನ ಹಾರಿಸಿದ್ದಾರೆ. ಭಾರತದಲ್ಲಿ ಯಾವುದೇ ಏರ್ಲೈನ್ಸ್ ಸಂಸ್ಥೆಯಲ್ಲಿ ಪೈಲಟ್ ಆಗಬೇಕಾದರೆ ಕನಿಷ್ಠ 200 ಗಂಟೆ ವಿಮಾನ ಹಾರಿಸಿದ ಅನುಭವ ಹೊಂದಿರಬೇಕಾದದ್ದು ಕಡ್ಡಾಯ.

ಕೋವಿಡ್ನಲ್ಲಿ ಬದಲಾದ ಯೋಚನೆ:

ಪೂಜಾ ಸದಾಂಗಿ ಅವರ ತಂದೆ ಸರೋಜಕುಮಾರ್ ಮೂಲತಃ ಒಡಿಶಾದವರು. ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಇವರ ತಾಯಿ ಶಾಂತಶ್ರೀ ಗೃಹಿಣಿ. ಇವರು ರಾಯಚೂರಿನವರು. ಇಬ್ಬರು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಬೀದರ್ನಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ಮುಂದಾದಾಗ, ಕಾರ್ಖಾನೆಗೆ ಒಬ್ಬ ಮುಖ್ಯ ಲೆಕ್ಕಾಧಿಕಾರಿ ಬೇಕಿತ್ತು. ಉತ್ತಮ ಹೆಸರು ಹೊಂದಿದ್ದ ಸರೋಜಕುಮಾರ್ ಅವರನ್ನು ಬೀದರ್ಗೆ ಕರೆಸಿಕೊಂಡಿದ್ದರು. ಅಂದಿನಿಂದ ಕುಟುಂಬ ಸಮೇತ ಇಲ್ಲಿಯೇ ವಾಸವಾಗಿದ್ದಾರೆ. ಆಗ ಇವರ ಮಗಳು ಪೂಜಾ ಅವರಿಗೆ 2 ವರ್ಷ ವಯಸ್ಸು.

ಬೀದರ್ನ ಗುರುನಾನಕ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ಓದಿದ ಪೂಜಾ, ಧಾರವಾಡದ ಹಂಚಿನಮನೆ ಕಾಲೇಜಿನಲ್ಲಿ ವಿಜ್ಞಾನ ಪಿಯುಸಿ ಮುಗಿಸಿದರು. ಬಳಿಕ 2022ರಲ್ಲಿ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ನಲ್ಲಿ ಬಿಬಿಎ ಪದವಿ ಪೂರ್ಣಗೊಳಿಸಿದರು.

ಅಹಮದಾಬಾದ್ನಲ್ಲಿ ಐಐಎಂ ಮಾಡಬೇಕೆಂಬ ಇಚ್ಛೆ ಅವರದಾಗಿತ್ತು. ಆದರೆ, ಕೋವಿಡ್ ಬಂದದ್ದರಿಂದ ಅದು ಸಾಧ್ಯವಾಗಲಿಲ್ಲ. ಕೋವಿಡ್ ಅವಧಿಯಲ್ಲಿ ಮನೆಯಲ್ಲಿದ್ದಾಗ, ಏವಿಯೇಷನ್ ಇಂಡಸ್ಟ್ರಿಯಲ್ಲಿದ್ದ ಸ್ನೇಹಿತರೊಂದಿಗೆ ಆಗಾಗ ಮಾತನಾಡುತ್ತಿದ್ದರು. ಅವರಿಗೆ ಗೊತ್ತಿಲ್ಲದೆ ಅದರ ಬಗ್ಗೆ ಆಸಕ್ತಿ ಬೆಳೆಯಿತು. ಕೋವಿಡ್ ನಂತರ ಬೆಂಗಳೂರಿಗೆ ತೆರಳಿ, ಫ್ಲೈಯಿಂಗ್ ಸ್ಕೂಲ್ ಸೇರಲು ಸಿದ್ಧತೆ ನಡೆಸಿ, ಲಿಖಿತ ಪರೀಕ್ಷೆ ಬರೆದರು. ಬಳಿಕ ಹರಿಯಾಣದಲ್ಲಿ ದಿವಾನಿ ಎಫ್ಎಸ್ಟಿಸಿ ಫ್ಲೈಯಿಂಗ್ ಸ್ಕೂಲ್ ಸೇರಿ ತರಬೇತಿ ಪೂರ್ಣಗೊಳಿಸಿದರು. ಇವರ ಅಣ್ಣ ವಿಶಾಲ ಡಯಾಲಿಸಿಸ್ ಟೆಕ್ನಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

‘ನನ್ನ ಮಗಳು ಪೈಲಟ್ ಆಗುವ ಆಸೆ ಇದೆ. ಫ್ಲೈಯಿಂಗ್ ಸ್ಕೂಲ್ ಸೇರುವೆ ಎಂದು ನಮ್ಮ ಬಳಿ ಹೇಳಿದಳು. ನಿನಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಮಾಡು ಎಂದೆ. ನಮ್ಮ ಮನೆಯವರು ಹಾಗೂ ನಾನು ಸಪೋರ್ಟ್ ಮಾಡಿದೆವು. ಈಗ ಮಗಳು ಅವಳ ಇಚ್ಛೆಯಂತೆ ಪೈಲಟ್ ಆಗಿದ್ದಾಳೆ’ ಎಂದು ಶಾಂತಶ್ರೀ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಮಗಳ ಸಾಧನೆಯಿಂದ ಬಹಳ ಖುಷಿಯಾಗಿದೆ. ನಮ್ಮ ಕುಟುಂಬದಲ್ಲಿ ಯಾರೂ ಪೈಲಟ್ ಇರಲಿಲ್ಲ. ಖುಷಿಯಿಂದ ಏನೂ ಹೇಳಬೇಕು ಗೊತ್ತಾಗುತ್ತಿಲ್ಲ
ಶಾಂತಶ್ರೀ ಸದಾಂಗಿ ಪೂಜಾ ತಾಯಿ

ನನ್ನ ಪೋಷಕರು ಮೊದಲಿನಿಂದಲೂ ನನಗೆ ಓದಲು ಸ್ವಾತಂತ್ರ್ಯ ಕೊಟ್ಟರು. ಅವರ ಸಹಕಾರ ಪ್ರೋತ್ಸಾಹದಿಂದ ಪೈಲಟ್ ಆಗಲು ಸಾಧ್ಯವಾಗಿದೆ.
ಪೂಜಾ ಸದಾಂಗಿ ಪೈಲಟ್

‘ಬಹಳ ಸವಾಲು ಎದುರಿಸಬೇಕಾಯಿತು’

‘ಯಾವ ವೃತ್ತಿಯೂ ಸುಲಭವಾದುದ್ದಲ್ಲ. ಏನೇ ಆಗಬೇಕಾದರೆ ಕಷ್ಟಪಡಬೇಕಾಗುತ್ತದೆ. ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾನು ಕೂಡ ಬಹಳ ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಪೈಲಟ್ ಆಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಪೂಜಾ ಸದಾಂಗಿ ‘ಪ್ರಜಾವಾಣಿ’ಗೆ ಹೇಳಿದ್ದಾರೆ. ಎಲ್ಲ ವೃತ್ತಿಗಳು ಚೆನ್ನಾಗಿರುತ್ತವೆ. ಯಾವುದರಲ್ಲಿ ನಮಗೆ ಆಸಕ್ತಿ ಇರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಮುನ್ನಡೆದರೆ ಯಶಸ್ಸು ಸಿಗುತ್ತದೆ. ಬೇರೆಯವರು ಮಾಡುತ್ತಿದ್ದಾರೆ ಎಂದು ನಾನು ಕೂಡ ಅದನ್ನೇ ಮಾಡಿದರೆ ಸರಿ ಹೋಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯವರ ಸಪೋರ್ಟ್ ಬಹಳ ಮುಖ್ಯ. ನನ್ನ ಪೋಷಕರು ನನಗೆ ಬಹಳ ಸ್ವಾತಂತ್ರ್ಯ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈಗ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಸಾಕಷ್ಟು ಮಾಹಿತಿ ಸಿಗುತ್ತಿದೆ. ಅದರ ಮೂಲಕ ಎಲ್ಲದರ ಬಗ್ಗೆ ತಿಳಿದುಕೊಳ್ಳಬಹುದು. ಈಗ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ನಾನು ಹೆಣ್ಣು ಮಗಳು ಎಂಬ ಕಾರಣದಿಂದ ಏನೂ ಆಗಲ್ಲ ಎಂಬ ಭಾವನೆ ದೂರವಾಗಿಸಿ ಗುರಿ ಇಟ್ಟುಕೊಂಡು ಮುನ್ನಡೆದರೆ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.