ಬೀದರ್: ಸೌದಿ ಅರೇಬಿಯಾದಲ್ಲಿ ಸೋಮವಾರ ಸಂಭವಿಸಿದ ಬಸ್ ಅಪಘಾತದಲ್ಲಿ ನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಂಗಳವಾರ ದೃಢಪಡಿಸಿದೆ.

ನಗರದ ಮೈಲೂರಿನ ಸಿಎಂಸಿ ಕಾಲೊನಿಯ ರಹಮತ್ ಬೀ (80) ಮೃತ ಮಹಿಳೆ. ಇವರು ಹೈದರಾಬಾದ್ ಮೂಲಕ ಸೌದಿಗೆ ಪ್ರಯಾಣ ಬೆಳೆಸಿದ್ದರು. ಸೌದಿ ಅರೇಬಿಯಾದ ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಟ್ಯಾಂಕರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ಅದರೊಳಗಿದ್ದ 45 ಮಂದಿ ಮೃತಪಟ್ಟಿದ್ದರು. ಅದೇ ಬಸ್ಸಿನಲ್ಲಿ ಬೀದರ್ ಮಹಿಳೆ ಪ್ರಯಾಣಿಸುತ್ತಿದ್ದರು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
.ಸೌದಿ ಬಸ್ ಅಪಘಾತ: ಒಂದೇ ಕುಟುಂಬದ ಮೂರು ತಲೆಮಾರಿನ 18 ಜನರು ಸಜೀವ ದಹನ.ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ: ಹುಬ್ಬಳ್ಳಿ ವ್ಯಕ್ತಿ ಮೃತ.Saudi Bus Accident | ಸೌದಿ ಬಸ್ ಅಪಘಾತ: ಸಹಾಯವಾಣಿ ಆರಂಭಿಸಿದ ತೆಲಂಗಾಣ ಸರ್ಕಾರ.ಸೌದಿ ಅರೇಬಿಯಾದಲ್ಲಿ ಅಪಘಾತ: ತೆಲಂಗಾಣದ 40ಕ್ಕೂ ಹೆಚ್ಚು ಮಂದಿ ಸಾವು; ಮೋದಿ ಸಂತಾಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.