ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐಗೆ ಇನ್ನೂರು ವರ್ಷದ ಇತಿಹಾಸ: ನಾಗರಾಜು ಕುಂಚ್

Published 2 ಜುಲೈ 2024, 15:26 IST
Last Updated 2 ಜುಲೈ 2024, 15:26 IST
ಅಕ್ಷರ ಗಾತ್ರ

ಬೀದರ್‌: ‘ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) 69ನೇ ಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಆದರೆ, ಬ್ಯಾಂಕಿಗೆ ಇನ್ನೂರು ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇದೆ’ ಎಂದು ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ನಾಗರಾಜು ಕುಂಚ್ ತಿಳಿಸಿದರು.

ನಗರದ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ 69ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ 1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಎಂದು ಪ್ರಾರಂಭವಾದ ಬ್ಯಾಂಕ್ 1955ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆಗಿ ಮರು ನಾಮಕರಣಗೊಂಡಿತು ಎಂದು ನೆನಪಿಸಿದರು.

ಬ್ಯಾಂಕ್ ಇಂದು ದೇಶ– ವಿದೇಶಗಳಲ್ಲಿ ಒಟ್ಟು 56 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಸುಮಾರು 29 ದೇಶಗಳಲ್ಲಿ 22 ಸಾವಿರಕ್ಕಿಂತಲ್ಲೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಉತ್ತಮ ತಾಂತ್ರಿಕತೆ ಹೊಂದಿರುವ ಯೂನೋ ಆ್ಯಪ್‌ ಸೇವೆ ಒದಗಿಸುತ್ತಿದೆ ಎಂದರು.

ನಿವೃತ್ತ ಜೆ.ಟಿ.ಒ. ಅಶೋಕ ವಿ. ಮಾತನಾಡಿ, ಎಸ್.ಬಿ.ಐ. ರೈತರು, ಬಡವರು, ನೌಕರ ವರ್ಗದವರು, ನಿವೃತರು ಸೇರಿದಂತೆ ಎಲ್ಲ ವರ್ಗದವರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಹೇಳಿದರು.

ಪತ್ರಕರ್ತ ಕೆ.ಎಲ್‌. ಚಂದನ್‌, ನಿವೃತ್ತ ಸಹಾಯಕ ಎಂಜಿನಿಯರ್ ಮಹಮ್ಮದ್‌ ಮೂನುಸ್, ಮಹಿಳಾ ಕಾಲೇಜಿನ ಉಪನ್ಯಾಸಕ ಮನೋಜ, ಎಸ್.ಬಿ.ಐ.ನ ಮುಖ್ಯ ವ್ಯವಸ್ಥಾಪಕ ಪ್ರಸಾದ, ರಮೇಶ ಶಿಂಧೆ, ಬ್ಯಾಂಕ್ ಅಧಿಕಾರಿಗಳಾದ ಪರಮೇಶ ರಡ್ಡಿ, ಶಶಿಕಾಂತ ಕಾಳೆ, ಮಾರುತಿ ದುಕಾನದಾರ, ಮಂಜುನಾಥ ಅನ್ವೇಕರ, ರವಿ, ನಾಮಕ, ಅಶೋಕ, ಪೋಲಿ ಬಿರಾದಾರ, ಮನೋಜ, ಬಸವರಾಜ, ಸಂಗೀತಾ, ನಂದಕಿಶೋರ, ಚಂದ್ರಶೇಖರ, ಅರುಣಾ, ಮಮತಾ, ಹರೀಶ, ಗುಲಶನ್, ಮೇಘನಾಥ, ನಾಮಕ, ವಿಷ್ಣುಕಾಂತ, ಶಂಭು, ಪ್ರಸಾದ, ವಂಶಿಕೃಷ್ಣ, ಅಶೋಕ, ಮುರಳಿ ಬಿರಾದಾರ, ಸೈಮದ್‌ ರಹಬಾಗ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT