ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಾಕ್‌ಡೌನ್: ತಳ್ಳು ಗಾಡಿಯಲ್ಲಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿ

ಲಾಕ್‌ಡೌನ್‌ನಿಂದ ವಾಹನಗಳ ಓಡಾಟಕ್ಕೆ ನಿರ್ಬಂಧ
Last Updated 10 ಮೇ 2021, 20:37 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಲಾಕ್‌ಡೌನ್‌ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಇಲ್ಲಿಯ ತ್ರಿಪುರಾಂತ ಓಣಿ ನಿವಾಸಿ ಮೆಹಮೂದಾ ಅವರು ಅನಾರೋಗ್ಯ ಪೀಡಿತ ಮಗಳನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಆಟೊಗಳು ಸಂಚರಿಸಬಹುದು ಎಂದು ಮಧ್ಯಾಹ್ನದವರೆಗೆ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಆಗ, ಮನೆ ಎದುರಿನ ತಳ್ಳು ಗಾಡಿಯ ಆಸರೆ ಪಡೆದರು. ನೆಂಟರೊಬ್ಬರ ನೆರವಿನಿಂದ ಎರಡು ಕಿಲೋ ಮೀಟರ್‌ನಷ್ಟು ತಳ್ಳು ಗಾಡಿಯಲ್ಲೇ ಬಾಲಕಿಯನ್ನು ಕರೆದು
ಕೊಂಡು ಹೋದರು. ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಕೂಡ ಬಂದ್ ಇದ್ದ ಕಾರಣ ಮತ್ತೆ ತ್ರಿಪುರಾಂತಕ್ಕೆ ಬಂದು ಕೆಜಿಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

‘ಆಸ್ಪತ್ರೆಗೆ ಹೋಗುವುದು ಅನಿವಾರ್ಯ ಆಗಿತ್ತು. ಆಟೊ ಸಿಗಲಿಲ್ಲ. ಹೀಗಾಗಿ ಮಗಳನ್ನು ತಳ್ಳು ಗಾಡಿಯಲ್ಲಿ ಕೂಡಿಸಿಕೊಂಡು ಹೋದೆವು’ ಎಂದು ತಾಯಿ ಮೆಹಮೂದಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT