ಗುರುವಾರ , ಆಗಸ್ಟ್ 11, 2022
23 °C
ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆ ಸ್ಥಿರ

ಬೀದರ್: ಮುದುಡಿದ ಹೂಕೋಸು, ಬಾಗಿದ ಬದನೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಆಗಾಗ ಸಾಧಾರಣ ಮಳೆಯಾಗುತ್ತಿರುವುದರಿಂದ ಹೆಚ್ಚು ಸೊಪ್ಪು ಬೆಳೆಯಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಬರುವುದು ಮುಂದುವರಿದಿದೆ. ಈ ನಡುವೆ ಬೆಲೆ ಕುಸಿತಕ್ಕೆ ಬದನೆಕಾಯಿ ಬಾಗಿದರೆ, ಹಿರೇಕಾಯಿ ಕಂಗಾಲಾಗಿದೆ. ಹೂಕೋಸು ಮುದುಡಿದರೆ, ಬೆಂಡೆ ಬೆಲೆ ಏರಿಕೆಯಾಗಿದೆ.

ಬೆಂಡೆಕಾಯಿ, ಬೀನ್ಸ್‌ ಹಾಗೂ ಕೊತ್ತಂಬರಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ. ಟೊಮೆಟೊ ಹಾಗೂ ಬೀಟ್‌ರೂಟ್ ₹ 1,500, ಬದನೆಕಾಯಿ, ಹಿರೇಕಾಯಿ, ಹಸಿ ಮೆಣಸಿನಕಾಯಿ, ಹೂಕೋಸು ಹಾಗೂ ಕರಿಬೇವು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಕುಸಿದಿದೆ. ಈ ವಾರ ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ, ಎಲೆಕೋಸು, ಗಜ್ಜರಿ, ಮೆಂತೆಸೊಪ್ಪು, ಸಬ್ಬಸಗಿ, ತೊಂಡೆಕಾಯಿ, ನುಗ್ಗೆ ಹಾಗೂ ಪಾಲಕ್‌ ಬೆಲೆ ಮಾತ್ರ ಸ್ಥಿರವಾಗಿದೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ಬೀಟ್‌ರೂಟ್‌, ತೊಂಡೆಕಾಯಿ ಹಾಗೂ ಬೆಂಡೆಕಾಯಿ, ಬೆಳಗಾವಿಯಿಂದ ನುಗ್ಗೆಕಾಯಿ, ಗಜ್ಜರಿ ಹಾಗೂ ಬೆಂಗಳೂರು ಗ್ರಾಮೀಣ ಪ್ರದೇಶದಿಂದ ಟೊಮೆಟೊ ಬಂದಿದೆ.

ಬೀದರ್‌ ಜಿಲ್ಲೆಯ ಗಾಮೀಣ ಪ್ರದೇಶದಿಂದ ಹಿರೇಕಾಯಿ, ಬದನೆಕಾಯಿ, ಎಲೆಕೋಸು, ಹೂಕೋಸು, ಮೆಂತೆ, ಸಬ್ಬಸಗಿ, ಪಾಲಕ್, ಕೊತಂಬರಿ ಹಾಗೂ ಕರಿಬೇವು ಮಾರುಕಟ್ಟೆಗೆ ಬಂದಿದೆ.

ತರಕಾರಿ ಮಾರುಕಟ್ಟೆಯಲ್ಲಿ ಇನ್ನೂ ಎರಡು ವಾರ ತರಕಾರಿ ಬೆಲೆ ಸ್ಥಿರವಾಗಿಯೇ ಇರಲಿದೆ. ಬೀನ್ಸ್‌ ಹಾಗೂ ಟೊಮೆಟೊ ಬೆಲೆಯಲ್ಲಿ ಮಾತ್ರ ಏರಿಳಿತಗಳು ಉಂಟಾಗಬಹುದು. ತರಕಾರಿ ಬೆಳೆದ ಸ್ಥಳೀಯ ರೈತರಿಗೂ ಕೈತುಂಬ ಹಣ ದೊರಕುತ್ತಿಲ್ಲ. ಒಟ್ಟಾರೆ ತರಕಾರಿ ಮಾರುಕಟ್ಟೆ ಮಂದವಾಗಿದೆ ಎಂದು ತರಕಾರಿ ವ್ಯಾಪಾರಿ ಪ್ರಶಾಂತ ತಪಸಾಳೆ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.