ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಈರುಳ್ಳಿ, ಹೆಚ್ಚಿದ ಬೆಂಡೆಕಾಯಿ ಬೆಲೆ

Last Updated 3 ಜನವರಿ 2020, 15:37 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ತರಕಾರಿ ಮಾರುಕಟ್ಟೆಗೆ ಬರುತ್ತಿರುವ ಅನೇಕ ಗ್ರಾಹಕರು ಏನನ್ನೂ ಕೊಂಡುಕೊಳ್ಳದಿದ್ದರೂ ಈರುಳ್ಳಿ ಬೆಲೆ ವಿಚಾರಿಸುತ್ತಿದ್ದಾರೆ. ಕಾರಣ ಕಳೆದ ವಾರ ಈರುಳ್ಳಿ ಪ್ರತಿ ಕೆ.ಜಿಗೆ ₹ 100 ರೂಪಾಯಿಗೆ ತಲುಪಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ವಾರ ಒಂದೇ ಬಾರಿಗೆ ₹ 40ಕ್ಕೆ ಇಳಿದಿದೆ.

ಈರುಳ್ಳಿ ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ನೆಮ್ಮದಿ ಉಂಟು ಮಾಡಿದೆ. ಬೆಳ್ಳುಳ್ಳಿ ಬೆಲೆ ಒಂದು ತಿಂಗಳಿಂದ ಸ್ಥಿರವಾಗಿದೆ. ಬೆಲೆ ಪ್ರತಿ ಕೆಜಿಗೆ ₹ 200 ರೂಪಾಯಿ ಇರುವ ಕಾರಣ ಗ್ರಾಹಕರು ಬೆಳ್ಳುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಈ ವಾರ ಬೆಂಡೆಕಾಯಿ ಬೆಲೆ ಮಾತ್ರ ಕ್ವಿಂಟಲ್‌ಗೆ ₹1 ಸಾವಿರ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ಟೊಮೆಟೊ, ಎಲೆಕೋಸು, ಹುಕೋಸು, ಗಜ್ಜರಿ, ಮೆಂತೆ, ಸಬ್ಬಸಗಿ, ಕೊತಂಬರಿ, ಪಾಲಕ್‌ ಬೆಲೆ ಸ್ಥಿರವಾಗಿದೆ.

ತರಕಾರಿ ಸಗಟು ಮಾರುಕಟ್ಟೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್‌ ಮಾರುಕಟ್ಟೆಯಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿದೆ.

‘ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಿಂದ ಬದನೆಕಾಯಿ, ಹಿರೇಕಾಯಿ, ಕೊತಂಬರಿ, ಕರಿಬೇವು, ಮೆಂತೆಸೊಪ್ಪು ಬಂದಿದೆ. ಬೇಡಿಕೆ ಇರುವಷ್ಟು ಸೊಪ್ಪು ಸ್ಥಳೀಯವಾಗಿ ದೊರಕುತ್ತಿರುವ ಕಾರಣ ಹೊರ ಜಿಲ್ಲೆಗಳಿಂದ ಸೊಪ್ಪು ಬಂದಿಲ್ಲ’ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT