ಬೀದರ್: ‘ನಾನ್ ಪ್ರ್ಯಾಕ್ಟಿಸಿಂಗ್ ಅಲೋವೆನ್ಸೆಸ್’ಗೆ (ಎನ್ಪಿಎ) ಸಂಬಂಧಿಸಿದಂತೆ ಹಣಕಾಸು ವ್ಯವಹಾರ ನಡೆದಿರುವ ಕುರಿತು ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ಇಲ್ಲ’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಪಿ.ಟಿ. ರಮೇಶ ತಿಳಿಸಿದ್ದಾರೆ.

‘ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಎನ್ಪಿಎ ಭತ್ಯೆ ಸರ್ಕಾರದ ಆದೇಶ, ಹಣಕಾಸು ಇಲಾಖೆಯ ಅನುಮೋದನೆ, ಆಡಳಿತ ಮಂಡಳಿಯ ಅನುಮೋದನೆ, ವಿಶ್ವವಿದ್ಯಾಲಯದ ಸ್ಪಷ್ಟೀಕರಣ, ಐಸಿಎಆರ್/ಕೇಂದ್ರ ಮಾರ್ಗಸೂಚಿಗಳ ಆಧಾರದ ಮೇರೆಗೆ ಜಾರಿಗೆ ಬರುತ್ತಿದೆ’ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಅನುಮತಿ ಪಡೆಯಲಾರದೇ ಪಶು ವಿವಿಯಲ್ಲಿ ಎನ್ಪಿಎ ಜಾರಿಗೊಳಿಸುವ ಆಮಿಷವೊಡ್ಡಿ ಬೋಧಕ ಸಿಬ್ಬಂದಿಯಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ವಿವಿ ನಿವೃತ್ತ ಸಿಬ್ಬಂದಿ ಕೆ. ವೆಂಕಟ್ ರೆಡ್ಡಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.