ಶನಿವಾರ, ಸೆಪ್ಟೆಂಬರ್ 26, 2020
27 °C
ಕೋವಿಡ್‌–19 ಹಾವಳಿ: ಕಾಣದ ಸಂಭ್ರಮ, ಮನೆಗಳಲ್ಲೇ ಆಚರಿಸಿದ ಜನರು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಶ್ರೀ ವಿದ್ಯಾಗಣಪತಿ ಮಂಡಳಿ: ನಾಳೆ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅದ್ಧೂರಿ ಗಣೇಶೋತ್ಸವಕ್ಕೆ ಹೆಸರಾದ ಚಾಮರಾಜನಗರದ ಶ್ರೀ ವಿದ್ಯಾಗಣಪತಿ ಮಂಡಳಿ ಕೂಡ ಈ ವರ್ಷ ಸರಳವಾಗಿ ಗಣೇಶೋತ್ಸವ ಆಯೋಜಿಸಿದ್ದು, ಎರಡೂವರೆ ಅಡಿಯ ಗಣಪತಿ ವಿಗ್ರಹವನ್ನು ಪ್ರತಿಷ್ಠಾನೆ ಮಾಡಿದೆ. ಈ ಬಾರಿಯದ್ದು, 58ನೇ ವರ್ಷದ ಗಣೇಶೋತ್ಸವ.

ಮಂಡಳಿಯು ಪ್ರತಿ ವರ್ಷ 30 ದಿನಗಳಿಗಿಂತಲೂ ಹೆಚ್ಚು ಕಾಲ ಗಣೇಶನನ್ನು ಪೂಜಿಸಿ, ನಂತರ ವಿಸರ್ಜನೆ ಮಾಡುತ್ತಿತ್ತು. ದಿನಪೂರ್ತಿ ನಡೆಯುತ್ತಿದ್ದ ವಿಸರ್ಜನೆ ಮೆರವಣಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ, ಕೊರೊನಾ ವೈರಸ್‌ ಕಾರಣದಿಂದ ಈ ವರ್ಷದ ಗಣೇಶೋತ್ಸವವನ್ನು ಮೂರು ದಿನಕ್ಕೆ ಮಿತಿಗೊಳಿಸಿದೆ. 

ಶನಿವಾರ ಬೆಳಿಗ್ಗೆ 11.30ಕ್ಕೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮಂಗಳವಾರ ಲೋಕಕಲ್ಯಾಣಾರ್ಥವಾಗಿ ಗಣಪತಿ ಹವನ ನೆರವೇರಿತು. ಸೋಮವಾರ ಸಂಜೆ ಸೂರ್ಯಾಸ್ತದ ನಂತರ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. 

‘ಸರ್ಕಾರದ ಮಾರ್ಗಸೂಚಿಗೆ ಅನುಸಾರವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಮೂರು ದಿನ ಮಾತ್ರ ಪೂಜಿಸುತ್ತಿದ್ದೇವೆ. ಸೋಮವಾರ ಸಂಜೆ ವಿಗ್ರಹ ವಿಸರ್ಜನೆ ನಡೆಯಲಿದೆ. ಪ್ರತಿಷ್ಠಾಪನೆ ಮಾಡಿದ ಸ್ಥಳದ ಸಮೀಪವೇ ಡ್ರಮ್‌ಗೆ ನೀರು ತುಂಬಿಸಿ, ಅದರಲ್ಲಿ ವಿಸರ್ಜನೆ ಮಾಡುತ್ತೇವೆ’ ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು