ವಿಜ್ಞಾನ ಶಿಕ್ಷಕ ಪರಶಿವಮೂರ್ತಿ, ‘ಇಸ್ರೊ ಸಂಸ್ಥೆ 2023ರ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆಯಿತು. ಭವಿಷ್ಯದಲ್ಲಿ ಗಗನ ಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವುದು ಹಾಗೂ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶ ಇದೆ. ಮಾನವನನ್ನು ಚಂದ್ರಗ್ರಹದ ಮೇಲೆ ಕಳುಹಿಸುವ ಮಹತ್ತರ ಯೋಜನೆಗೆ ಇಸ್ರೊ ಸಿದ್ಧತೆ ನಡೆಸಿದ್ದು, ಇಂದಿನ ಯುವ ಪೀಳಿಗೆಗೆ ಸ್ಫೂರ್ತಿತಿಯಾಗಿದೆ’ ಎಂದರು.