ಕೊಳ್ಳೇಗಾಲ: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ನಾಲ್ಕನೇ ಸೌತ್ ಇಂಡಿಯಾ ರೋನಲ್ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯ 6 ಕರಾಟೆ ಪಟುಗಳು ಪಾಲ್ಗೊಂಡು 4 ಚಿನ್ನ, 3 ಬೆಳ್ಳಿ 3 ಕಂಚಿನ ಪದಕ ಗಳಿಸಿದ್ದಾರೆ.

14 ವರ್ಷ ಒಳಗಿನ ವಯೋಮಿತಿಯಲ್ಲಿನ ಸ್ಪರ್ಧೆಯಲ್ಲಿ ಪಾಲ್ಗೊಂಡ 6 ಮಕ್ಕಳ ಪೈಕಿ ಕೊಳ್ಳೇಗಾಲದ ಬಾಪುನಗರದ ಕರಾಟೆ ಶಿಕ್ಷಕ ನಂಜುಂಡಸ್ವಾಮಿ ಪುತ್ರ ಭ್ರತ್ವ ಕಣ್ಣಗೆ ಚಿನ್ನ ಮತ್ತು ಬೆಳ್ಳಿ, ಕುರುಬನಕ್ಷೆ ಗ್ರಾಮದ ಅನುಶ್ರೀ ಚಿನ್ನ ಮತ್ತು ಕಂಚು, ನಯನ ಕುಕ್ಕೂರು ಚಿನ್ನ, ಧನಗೆರೆ ಗ್ರಾಮದ ಲಿಖಿತ್ ಜೋಗಿಗೆ ಚಿನ್ನ, ಕೊಳ್ಳೇಗಾಲದ ಕೃತಿಕ್ ಶ್ರೇಷ್ಟಿ ಬೆಳ್ಳಿ, ಕಂಚು, ನೂತನ್ಗೆ ಬೆಳ್ಳಿ, ಕಂಚಿನ ಪದಕ ಬಂದಿದೆ.

ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಕರಾಟೆ ಇಂಡಿಯಾ ಆರ್ಗನೈಸೇಷನ್ ಕಾರ್ಯದರ್ಶಿ ಸಂಜೀವ್ ಕುಮಾರ್ಜಂಗ್ರ, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಮಾಚಯ, ಕೇರಳ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ರಾಮ್ ದಯಾಳ್, ಚಾಮರಾಜನಗರ ಜಿಲ್ಲಾ ಕರಾಟೆ ಅಧ್ಯಕ್ಷಕೆ ನಂಜುಂಡಸ್ವಾಮಿ, ಕೋಚ್ ಲಿಖಿತ್ ಪ್ರಶಂಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.