ಮಂಗಳವಾರ, ಮೇ 18, 2021
22 °C

ಮಹದೇಶ್ವರ ಬೆಟ್ಟ: ಕಸ ಹಾಕುವ ಜಾಗದಲ್ಲಿ ಚಿನ್ನದ ಕರಡಿಗೆ ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇಶ್ವರ ಬೆಟ್ಟ: ನಾಪತ್ತೆಯಾಗಿದ್ದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಯ ಕರಡಿಗೆ ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ ಗುರುವಾರ ಪತ್ತೆಯಾಗಿದೆ.

ಮಧ್ಯಾಹ್ಯ 3.45ರ ಸುಮಾರಿಗೆ ದೇವಾಲಯದ ಹೊರಗುತ್ತಿಗೆ‌ ನೌಕರ ಸುನೀಲ್ ಕುಮಾರ್ ಎಂಬುವವರಿಗೆ ಕರಡಿಗೆ ಸಿಕ್ಕಿದೆ.

ತಕ್ಷಣ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಬೆಟ್ಟ ಠಾಣೆ ಇನ್ ಸ್ಪೆಕ್ಟರ್ ರಮೇಶ್, ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

'ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯು ತ್ಯಾಜ್ಯ ವಸ್ತು ಮಧ್ಯೆ‌ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡು ಮಹಜರು ಮಾಡುತ್ತಿದ್ದು ನಂತರ ದೇವಾಲಯಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ' ಎಂದು ಜಯವಿಭವಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: 

ಪ್ರಕರಣ ಸುಖಾಂತ್ಯ‌ ಕಂಡಿದೆ. ಆದರೆ, ನಿರ್ಲಕ್ಷ್ಯತನದ ಬಗ್ಗೆ ಹಾಗೂ‌ ಬೇಜವಾಬ್ದಾರಿ ಬಗ್ಗೆ‌ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

30 ಗ್ರಾಂ ಚಿನ್ನದ ಕರಡಿಗೆ ವಾರದ ಹಿಂದೆ ನಾಪತ್ತೆಯಾಗಿತ್ತು. ಬುಧವಾರ ಪ್ರಾಧಿಕಾರದ ಕಾರ್ಯದರ್ಶಿ ಅವರು ಠಾಣೆಗೆ ದೂರು ನೀಡಿದ್ದರು.

ವಾರದ ನಂತರ ರಾಜಗೋಪುರದ ಬಳಿಯ ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಒಂದು ವಾರದಿಂದ ಕರಡಿಗೆ ಅಲ್ಲಿಯೇ ಬಿದ್ದಿರಲು ಸಾಧ್ಯವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು