ಭಾನುವಾರ, ಜೂಲೈ 5, 2020
27 °C
ಎರಡು ದಿನಗಳಲ್ಲಿ 12 ಮಂದಿಯಿಂದ ಸೇವೆ, ₹2,500 ಸಂಗ್ರಹ

ಭಕ್ತರಿಂದ ಮಲೈ ಮಾದಪ್ಪನ ಆನ್‌ಲೈನ್‌ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಆನ್‌ಲೈನ್‌ ದರ್ಶನ ಹಾಗೂ ವಿವಿಧ ಸೇವೆಗಳಿಗೆ ಅನುವು ಮಾಡಿದ ಬೆನ್ನಲ್ಲೇ 12 ಮಂದಿ ವಿವಿಧ ಸೇವೆಗಳನ್ನು ಮಾಡಿಸಿದ್ದಾರೆ. ಸಾವಿರಾರು ಭಕ್ತರು www.mmhillstemple.com ವೆಬ್‌ಸೈಟ್‌ಗೆ ಭೇಟಿ ನೀಡಿ ಮಾದಪ್ಪನ ದರ್ಶನವನ್ನೂ ಮಾಡಿದ್ದಾರೆ. 

ಎರಡು ದಿನಗಳಲ್ಲಿ (ಬುಧವಾರ ಮತ್ತು ಗುರುವಾರ) ಆರು ಮಂದಿ ರುದ್ರಾಭಿಷೇಕ ಹಾಗೂ ವಿವಿಧ ಸೇವೆಗಳನ್ನು ಮಾಡಿಸಿದರೆ, ಇನ್ನುಳಿದವರು ಇ–ದೇಣಿಗೆ ಹಾಗೂ ಅಕ್ಕಿಸಮರ್ಪಣೆ, ಅನ್ನದಾಸೋಹ ಸೇವೆ ಮಾಡಿಸಿದ್ದಾರೆ. ಈ ಸೇವೆಗಳಿಂದ ₹2,500 ಸಂಗ್ರಹವಾಗಿದೆ.   

ಕೋವಿಡ್‌–19 ಕಾರಣಕ್ಕೆ ಎರಡು ದಿನಗಳಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಭಕ್ತರಿಗೆ ಆನ್‌ಲೈನ್‌ ಮೂಲಕ ದರ್ಶನ ಹಾಗೂ ಇತರ ಸೇವೆಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರ ಸೂಚಿಸಿದ ನಂತರ, ಬುಧವಾರದಿಂದ ಆನ್‌ಲೈನ್‌ ಸೇವೆಗೆ ಚಾಲನೆ ನೀಡಲಾಗಿತ್ತು.

‘ಆನ್‌ಲೈನ್‌ ದರ್ಶನಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಬುಧವಾರದಿಂದಲೇ ಭಕ್ತರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿವಿಧ ಸೇವೆಗಳ ಶುಲ್ಕದ ವಿವರಗಳನ್ನು ಪ್ರಕಟಿಸಲಾಗಿದ್ದು, ಭಕ್ತರು ಮುಂಚಿತವಾಗಿ ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಿ ವಿವಿಧ ಸೇವೆಗಳನ್ನು  ಮಾಡಿಸಬಹುದಾಗಿದೆ. ಅವರ ಹೆಸರಿನಲ್ಲಿ ನಡೆಯುವ ಪೂಜಾ ಕೈಂಕರ್ಯಗಳು ನಡೆಯುವ ಸಮಯದ ಬಗ್ಗೆ ಮೊದಲೇ ಅವರಿಗೆ ಮಾಹಿತಿ ನೀಡಲಾಗುವುದು’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು