ಯಳಂದೂರು: ತಾಲ್ಲೂಕಿನ ಗುಂಬಳ್ಳಿಯಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಮರು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಭಾವೈಕ್ಯತೆ ಸಾರುವ ಹಬ್ಬದ ಹತ್ತನೇ ದಿನ ಅಶುರಾ ಆಚರಣೆಯೊಂದಿಗೆ ಭಾನುವಾರ ಮೊಹರಂಗೆ ತೆರೆ ಬಿದ್ದಿತು.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಸೀದಿಗಳಲ್ಲಿ ಪಂಜಾ (ಕೈ) ಕೂರಿಸಿ, ಸಿಂಗರಿಸಿ ವಿಶೇಷವಾಗಿ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಹಬ್ಬದಂದು ಅಲ್ಲಾಹುಗೆ ಕೃತಜ್ಞತೆ ಸಲ್ಲಿಸಿ, ಜನರು ವಿಶೇಷ ಊಟ ಸವಿಯುತ್ತಾರೆ.

ಮಹಮ್ಮದೀಯರಿಗೆ ಮೊಹರಂ ಮೊದಲ ಮಾಸ. ಈ ದಿನದಿಂದ ಇಸ್ಲಾಂ ವರ್ಷ ಪ್ರಾರಂಭವಾಗುತ್ತದೆ. ಇಸ್ಲಾಂ ಧರ್ಮ ಸಂಸ್ಥಾಪಕ ಮಹಮ್ಮದ್ ಫೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಸ್ಮರಣಾರ್ಥ ಹಬ್ಬ ಆಚರಿಸಲಾಗುತ್ತದೆ ಎಂದು ಅಬ್ದುಲ್ ಅಜೀಜ್ ಹೇಳಿದರು.

ಮೊಹರಂ ದಿನದಂದು ಬಾಬಯ್ಯನಿಗೆ ಹಿಂದೂಗಳು ನಡೆದುಕೊಳ್ಳುತ್ತಾರೆ. ಸಕ್ಕರೆ, ಧೂಪ ಅರ್ಪಿಸಿ ದರ್ಶನ ಪಡೆಯುತ್ತಾರೆ. ಸಂಜೆ ಮುಸ್ಲಿಮರು ಪಂಜಾಕ್ಕೆ ವಂದಿಸಿ, ಹರಕೆ ಸಲ್ಲಿಸುತ್ತಾರೆ. ವಿಶೇಷ ಖಾದ್ಯ ತಯಾರಿಸಿ ನೆರದವರಿಗೂ ಹಂಚುತ್ತಾರೆ ಎಂದು ಗುಂಬಳ್ಳಿ ಗ್ರಾಮದ ಜಬ್ಬಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.