ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಶಿಕ್ಷಣ ವರ್ಣ ಪದ್ಧತಿಯ ‘ನವರೂಪ‘

ಮಕ್ಕಳ ಲೋಕದ ಮನಸುಗಳ ದುಂಡುಮೇಜಿನ ಸಭೆಯಲ್ಲಿ ದೇವನೂರ ಮಹಾದೇವ ಅಭಿಮತ
Last Updated 13 ಜುಲೈ 2019, 14:08 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೊಠಾರಿ ಆಯೋಗದ ವರದಿಯಂತೆ ಏಕರೂಪದ ಮತ್ತು ಸಮಾನ ಶಿಕ್ಷಣ ದೇಶದಲ್ಲಿ ಅನುಷ್ಠಾನಕ್ಕೆ ಬರದಿದ್ದರೆ ಸಮಾಜದಲ್ಲಿ ವರ್ಗಗಳ ನಡುವಿನ ಅಂತರ ಇನ್ನಷ್ಟು ಹೆಚ್ಚಿ ಅಪಾಯ ಎದುರಾಗಬಹುದು’ ಎಂದು ಸಾಹಿತಿ ದೇವನೂರ ಮಹಾದೇವ ಶನಿವಾರ ಆತಂಕ ವ್ಯಕ್ತಪಡಿಸಿದರು.

ನಗರದ ದೀನಬಂಧು ಆಶ್ರಮದಲ್ಲಿ ಧಾರವಾಡದ ಚಿಲಿಪಿಲಿ ಸಂಸ್ಥೆ, ದೀನಬಂಧು ಮತ್ತು ರಂಗವಾಹಿನಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಲೋಕದ ಮನಸುಗಳ ದುಂಡುಮೇಜಿನ ಸಭೆ’ಯಲ್ಲಿ ಅವರು ಮಾತನಾಡಿದರು.

‘ಹಿಂದೆ ಎರಡು ಮೂರು ಬಗೆಯ ತಾರತಮ್ಯದ ಶಿಕ್ಷಣ ಇತ್ತು. ಇಂದು ಒಂಬತ್ತು ಬಗೆಯ ತಾರತಮ್ಯದ ಶಿಕ್ಷಣ ಇದೆ. ಒಳ್ಳೆಯ ಸಮಾಜದ ನಿರ್ಮಾಣಕ್ಕೆಇಂದಿನ ಶಿಕ್ಷಣ ಪೂರಕವಾಗಿಲ್ಲ. ಚಾತುರ್ವರ್ಣ ಪದ್ಧತಿಯ ನವರೂಪವಾಗಿದೆ.ಅಂದುಶಿಕ್ಷಣವನ್ನು ಕೊಡಲ್ಲ ಎನ್ನುತ್ತಿದ್ದರು. ಇಂದು ಕೊಟ್ಟು ವಂಚಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮಲ್ಲಿಹಿಂದೆಬಹುತೇಕ ಸರ್ಕಾರಿ ಶಾಲೆಗಳೇ ಇದ್ದವು. ಆಗ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರೆಯುತಿತ್ತು. ಅಂಥದೊಂದು ವಾತಾವರಣ ಮತ್ತೆ ನಿರ್ಮಾಣ ಆಗಬೇಕು. ದೇಶದಲ್ಲಿ ಸಮಾನ ಹಾಗೂ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವಂತೆ ಕೊಠಾರಿ ಆಯೋಗ ವರದಿ ನೀಡಿತ್ತು. ಆಯೋಗದ ವರದಿಯನ್ನುಸರ್ಕಾರಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನಿಷ್ಪ್ರಯೋಜಕರು ಎಂದು ನಮ್ಮ ಸಮಾಜ ಭಾವಿಸಿದೆ. ಸಂವಿಧಾನಶೀಲ ರಾಷ್ಟ್ರಗಳಲ್ಲಿ ಶಾಲೆ ಬಿಟ್ಟವರನ್ನುವಿಶೇಷ ಪ್ರತಿಭೆ ಎಂದು ಪರಿಗಣಿಸಿ ಇವರೊಳಗಿನ ಪ್ರತಿಭೆ ಹೊರಬರುವ ವಾತಾವರಣದಲ್ಲಿ ಇರಿಸುತ್ತಾರೆ. ತರಬೇತಿ ನೀಡುತ್ತಾರೆ. ಅಲ್ಲಿ ಬಹುಮಾನ ಅಭಿಮಾನವಾಗಿ ರೂಪುಗೊಳ್ಳುತ್ತದೆ. ಆಗ ನಿಷ್ಪ್ರಯೋಜಕರಾಗದೆ ಅವರು ಸಂಪತ್ತು ಆಗುತ್ತಾರೆ’ ಎಂದರು.

ರಂಗಕರ್ಮಿ ನಿರ್ದೇಶಕ ಬಿ.ಸುರೇಶ ಮಾತನಾಡಿ, ‘ಮಕ್ಕಳ ಸಿನಿಮಾಕ್ಕೆ ಹೊಸ ಚಾಲನೆ, ಹೊಸ ಶಕ್ತಿ ಕೊಡುವುದುಇಂದಿನ ಅಗತ್ಯ. ಮಕ್ಕಳ ಸಿನಿಮಾಗಳು ಪರಿಣಾಮ, ಪರಿಮಾಣ ಹಾಗೂ ಪ್ರಾಮಾನ್ಯ ಇಟ್ಟುಕೊಂಡು ಸಿದ್ಧವಾಗಬೇಕು.ಈ ವರ್ಷ ಸೆನ್ಸಾರ್‌ ಆದ266 ಸಿನಿಮಾಗಳಲ್ಲಿ42 ಮಕ್ಕಳ ಸಿನಿಮಾಗಳು ಎಂದು ಸರ್ಟಿಫಕೇಟ್‌ ಪಡೆದಿವೆ. ಇವುಗಳಲ್ಲಿ ಬಹುತೇಕ ಮಕ್ಕಳ ಸಿನಿಮಾಗಳುಸರ್ಕಾರದ₹ 25 ಲಕ್ಷ ಸಹಾಯಧನಕ್ಕಾಗಿ ತಯಾರಾಗಿವೆ’ ಎಂದರು.

‘ಮಕ್ಕಳ ರಂಗಭೂಮಿ ಕಡಿಮೆ ಜನರನ್ನು ಮುಟ್ಟುತ್ತದೆ. ದೃಶ್ಯ ಮಾಧ್ಯಮ ಹೆಚ್ಚು ಜನರನ್ನು ತಲುಪುತ್ತದೆ. ಆದರೆ, ಮಕ್ಕಳ ಸಿನಿಮಾ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಹಿರಿತೆರೆ, ಕಿರುತೆರೆಯಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಬುದ್ಧಿವಂತಿಕೆ, ತಿಳಿವಳಿಕೆ ಇಲ್ಲವಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿ ಮಕ್ಕಳ ವಿಕಾಸ, ಆಲೋಚನೆಗೆ ಪೂರಕವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ್ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಭೆಯಲ್ಲಿ ಮಕ್ಕಳಿಗೆ ದೃಶ್ಯ ಮಾಧ್ಯಮ ಶಿಕ್ಷಣ, ಮಕ್ಕಳ ಹಕ್ಕುಗಳು, ಕುಟುಂಬ, ಸಾಂಸ್ಕೃತಿಕ, ರಂಗಭೂಮಿ, ಸಾಹಿತ್ಯ ಕುರಿತು ಮಕ್ಕಳ ತಜ್ಞರಿಂದ ಚರ್ಚೆ ನಡೆಯತು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಇದ್ದರು.

ರಾಜ್ಯದ ವಿವಿಧ ಭಾಗಗಳಿಂದ 50 ಹೆಚ್ಚು ಪ್ರತಿನಿಧಿಗಳು ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು.

‘ಸಹಜ ಬಾಲ್ಯ ಕೊಲ್ಲುತ್ತಿರುವ ಶಿಸ್ತಿನ ಶಿಕ್ಷಣ’

‘ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಬುರುಡೆಯೊಳಗೆ ಮಾಹಿತಿ ತುರುಕಲಾಗುತ್ತಿದೆ. ಈ ಶಿಕ್ಷಣದಲ್ಲಿ ಶೇ 80ರಷ್ಟು ಮಾಹಿತಿಯೇ ಆವರಿಸಿಕೊಂಡು ಮಕ್ಕಳಲ್ಲಿ ಸಹಜವಾಗಿರುವ ಕಲ್ಪನೆ, ಭಾವನೆ, ಸಂವೇದನೆ ಹೊರಟುಹೋಗುತ್ತಿದೆ. ಇಂದಿನ ಶಿಸ್ತಿನ ಶಿಕ್ಷಣವು ಮಕ್ಕಳ ಸಹಜ ಬಾಲ್ಯವನ್ನು ಕೊಲ್ಲುತ್ತಿದೆ’ಎಂದು ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ಎಲ್ಲವೂ ಉದ್ಯಮವಾಗಿವೆ: ‘ಖಾಸಗಿ ಶಿಕ್ಷಣ ಸಂಸ್ಥೆಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇವ್ಯಾಪಾರೀಕರಣಗೊಳಿಸಿವೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳಲ್ಲಿ ಬೆಳೆಯುವುದು ಇಂಥದೇಮನೋಭಾವ. ಶಿಕ್ಷಣದ ಜತೆಯಲ್ಲಿ ಅನೇಕಕ್ಷೇತ್ರಗಳುಈಗ ವ್ಯಾಪಾರೀಕರಣದಿಂದ ಬಳಲುತ್ತಿದ್ದು, ಹಣವೇ ಎಲ್ಲವನ್ನೂ ನಿರ್ಣಯಿಸುವ ಹಂತಕ್ಕೆ ಬಂದಿದೆ.ಎಲ್ಲವೂ ಉದ್ಯಮವಾಗಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಕೂಡ ಉದ್ಯಮವಾಗಿಸಿಕೊಂಡರುವುದು ಆತಂಕಕಾರಿ’ ಎಂದು ಡಾ.ಎಚ್.ಡಿ.ಪ್ರಶಾಂತ ಹೇಳಿದರು.

ಬಾಲ್ಯ ಸೃಜನಶೀಲವಾಗಬೇಕು: ಜಯದೇವ

ದೀನಬಂಧುಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಮಾತನಾಡಿ, ‘ನಾವು ಸೃಷ್ಟಿಸಿಕೊಂಡ ನರಕಕ್ಕೆ ಮಕ್ಕಳನ್ನು ಹೊಣೆಗಾರರನ್ನಾಗಿ ಮಾಡಿದ್ದೇವೆ. ಬಡತನ ಮಕ್ಕಳಿಗೆ ಪ್ರಮೇಯವೇ ಅಲ್ಲ. ಮಕ್ಕಳು ತಮ್ಮ ಬಾಲ್ಯವನ್ನು ಅತ್ಯಂತ ಪ್ರೀತಿಯಿಂದ ಕಂಡರೆ ಅಂತಹ ಮನಸ್ಸುಗಳು ಸೃಜನಶೀಲವಾಗುತ್ತವೆ. ಬಾಲ್ಯವನ್ನು ಮಕ್ಕಳು ಅನುಭವಿಸಬೇಕು.ನಾವು ಮಕ್ಕಳನ್ನು ನಿಜವಾಗಲೂ ಪ್ರೀತಿಯಿಂದ ನೋಡಿಕೊಂಡಿದ್ದರೆ ದೇಶದಲ್ಲಿ ಯುದ್ಧಗಳು ನಡೆಯುತ್ತಿರಲಿಲ್ಲ. ಮಕ್ಕಳು ಬಾಲ್ಯವನ್ನು ಪ್ರೀತಿಯಿಂದ ಕಂಡಾಗ ಸೃಜನಶೀಲವಾಗುತ್ತದೆ. ನನ್ನ ಮನೆ, ನಮ್ಮ ಊರು, ನನ್ನ ಶಾಲೆ ಎಂಬುದು ಮಕ್ಕಳಲ್ಲಿ ಹೆಮ್ಮೆ ಹುಟ್ಟಿಸುತ್ತವೆ’ ಎಂದರು.

ರಂಗಕರ್ಮಿ ಮಂಡ್ಯ ರಮೇಶ್ ಮಾತನಾಡಿ, ‘ನನ್ನ ಮಕ್ಕಳು ರಾತ್ರೋರಾತ್ರಿ ತುಂಬಾ ಎತ್ತರಕ್ಕೆ ಬೆಳೆಯಬೇಕು ಎನ್ನುವ ಮನೋಭಾವಪೋಷಕರಲ್ಲಿದೆ. ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬಾರದು. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ಸಾಮಾಜಿಕ ಪಿಡುಗು. ಒಂದು ಸಿನಿಮಾ, ಧಾರಾವಾಹಿ ಮಾಡಿದ ಮಗುವನ್ನುವೈಭವದಿಂದ ನೋಡುವುದು ಒಳ್ಳೆಯದಲ್ಲ. ಇನ್ನೊಬ್ಬರ ಸಂತೋಷಕ್ಕಾಗಿ ಬದುಕುವ ಸ್ಥಿತಿ ಬಂದಿದೆ. ದೃಶ್ಯ ಮಾಧ್ಯಮದಲ್ಲಿ ಒಂದು ವರ್ಷ ಅಥವಾ6 ತಿಂಗಳು ಚಿತ್ರೀಕರಣಕ್ಕಾಗಿ ಮಕ್ಕಳು ಶಾಲೆ ಬಿಟ್ಟು ಹೋಗುವುದು ಮಕ್ಕಳ ಮೇಲಿನ ಶೋಷಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT