ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ನಡೆಯುತ್ತಿರುವ ಯುನಾನಿ ಆಸ್ಪತ್ರೆಗೆ ಸ್ವಂತ ಕಟ್ಟಡ ಹೊಂದಬೇಕು ಎನ್ನುವ ಆಯುಷ್ ಇಲಾಖೆಯ ಪ್ರಯತ್ನ ವರ್ಷಗಳು ಉರುಳಿದರೂ ಫಲಿಸುತ್ತಿಲ್ಲ.

‘ಯುನಾನಿ ಆಸ್ಪತ್ರೆಗೆ ಜಾಗ ದೊರಕಿಸಿಕೊಡಿ’ ಎಂದು ಗೌರಿಬಿದನೂರು ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಜಿಲ್ಲಾ ಆಯುಷ್ ಇಲಾಖೆಯು ಪತ್ರಗಳನ್ನು ಬರೆಯುತ್ತಲೇ ಇದೆ. ಆದರೆ ಜಾಗದ ವಿಚಾರವಾಗಿ ಯಾವುದೇ ಸ್ಪಂದನೆಯೂ ಗೌರಿಬಿದನೂರು ಆಡಳಿತದಿಂದ ದೊರೆತಿಲ್ಲ.

ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿ ಚಿಕಿತ್ಸೆ ಒಳಗೊಂಡು ಆಯುಷ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈ ಚಿಕಿತ್ಸೆಗಳನ್ನು ಪಡೆಯಲು ದಿನದಿಂದ ದಿನಕ್ಕೆ ದೊಡ್ಡ ಸಂಖ್ಯೆಯಲ್ಲಿಯೇ ರೋಗಿಗಳು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಗೌರಿಬಿದನೂರು ತಾಲ್ಲೂಕು ಆಸ್ಪತ್ರೆಯ ಒಂದು ಕೊಠಡಿಯಲ್ಲಿ ಯುನಾನಿ ಆಸ್ಪತ್ರೆ ಈ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿತ್ತು. ಆಸ್ಪತ್ರೆಯನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಯಿತು. ಅಷ್ಟರಲ್ಲಿ ಯುನಾನಿ ಆಸ್ಪತ್ರೆಯನ್ನು ಎಪಿಎಂಸಿ ಬಳಿಗೆ ಸ್ಥಳಾಂತರಿಸಲಾಯಿತು. ಹೊಸದಾಗಿ ನಿರ್ಮಾಣವಾಗಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದು ಕೊಠಡಿಯನ್ನಾದರೂ ಕೊಡಿ ಎಂದು ಆಯುಷ್ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಸಹ ಬರೆದಿದೆ. ಆದರೆ ಇದಕ್ಕೂ ಯಾವುದೇ ಸ್ಪಂದನೆ ದೊರೆತಿಲ್ಲ.

ಆಯುಷ್ ಇಲಾಖೆಯ ಬಳಿ ಗೌರಿಬಿದನೂರಿನಲ್ಲಿ 10 ಹಾಸಿಗೆ ಸಾಮರ್ಥ್ಯದ ಯುನಾನಿ ಆಸ್ಪತ್ರೆ ನಿರ್ಮಾಣಕ್ಕೆ ಹಣವೂ ಇದೆ. ಆದರೆ ಜಾಗ ದೊರೆಯದ ಕಾರಣ ಆಸ್ಪತ್ರೆಯು ಖಾಸಗಿ ಕಟ್ಟಡದಲ್ಲಿಯೇ ನಡೆಯುವಂತಾಗಿದೆ. ಸಿಎ ನಿವೇಶನಗಳನ್ನು ದೊರೆಕಿಸಿಕೊಡುವ ಪ್ರಯತ್ನಗಳೂ ಸಹ ನಡೆದಿಲ್ಲ.

‘ಕನಿಷ್ಠ 20 ಗುಂಟೆ ಅಥವಾ ಒಂದು ಎಕರೆ ಜಮೀನು ಕೊಡಿ ಎಂದು ಗೌರಿಬಿದನೂರು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದೇವೆ. ಈ ಕುರಿತು ಪತ್ರ ವ್ಯವಹಾರಗಳನ್ನೂ ಮಾಡಿದ್ದೇವೆ. ಆದರೆ ಯಾವುದಕ್ಕೂ ಸ್ಪಂದನೆ ದೊರೆತಿಲ್ಲ. ಕಟ್ಟಡ ನಿರ್ಮಾಣಕ್ಕೆ ಹಣವಿದೆ’ ಎಂದು ಜಿಲ್ಲಾ ಆಯುಷ್ ಇಲಾಖೆ ಮೂಲಗಳು ತಿಳಿಸುತ್ತವೆ.

‘ದೊಡ್ಡ ಪ್ರಮಾಣದಲ್ಲಿ ಜಾಗ ನೀಡಿದರೆ ಅಲ್ಲಿಯೇ ಔಷಧೀಯ ಸಸ್ಯಗಳನ್ನೂ ಬೆಳೆಸಲಾಗುವುದು. ಈ ಹಿಂದೆ ಹಿರೇಬಿದನೂರು ಬಳಿ ಜಾಗ ನೀಡುತ್ತೇವೆ ಎಂದು ತಾಲ್ಲೂಕು ಆಡಳಿತ ತಿಳಿಸಿತ್ತು. ಆದರೆ ಆ ನಂತರ ಯಾವುದೇ ಪ್ರಕ್ರಿಯೆಗಳು ನಡೆಯಲಿಲ್ಲ’ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

ಚಿಕ್ಕಬಳ್ಳಾಪುರದ್ದೂ ಆಮೆ ನಡಿಗೆ: ಚಿಂತಾಮಣಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿಯೇ ಆಯುಷ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿ. ಇಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಚಿಕಿತ್ಸೆಗಾಗಿ ರೋಗಿಗಳು ಬರುವರು

ಚಿಕ್ಕಬಳ್ಳಾಪುರದಲ್ಲಿ ಚದುಲಪುರ ಕ್ರಾಸ್ನ ಖಾಸಗಿ ಬಡಾವಣೆಯ ಸಿಎ ನಿವೇಶದಲ್ಲಿ ಆಯುಷ್ ಇಲಾಖೆಯು ಸಂಯುಕ್ತ ಯೋಗ ಆಸ್ಪತ್ರೆ ನಿರ್ಮಿಸುತ್ತಿದೆ. ಈ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಸಹ ಆಮೆಗತಿಯಲ್ಲಿದೆ. ನಾಲ್ಕೈದು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಲೇ ಇದೆ.

ಇತ್ತೀಚಿನವರೆಗೆ ಸ್ಥಗಿತವಾಗಿದ್ದ ಕಾಮಗಾರಿಗೆ ಈಗ ಸ್ವಲ್ಪ ವೇಗ ದೊರೆತಿದೆ. ನೆಲ ಮಹಡಿ ಮತ್ತು ಮೊದಲ ಹಂತದ ಕಾಮಗಾರಿಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಏಕೆ ವಿಳಂಬವಾಯಿತು ಎನ್ನುವುದನ್ನು ನೋಡಿದರೆ ಇಲ್ಲಿಯೂ ಜಾಗದ್ದೇ ಸಮಸ್ಯೆ ಎನ್ನುವುದು ಗೋಚರಿಸುತ್ತದೆ.

ಆಸ್ಪತ್ರೆ ಮಂಜೂರಾದರೂ ಜಾಗದ ಗೊಂದಲಗಳ ಕಾರಣ ಎರಡು ಮೂರು ವರ್ಷಗಳ ಕಾಲ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ನನೆಗುದಿಗೆ ಬಿದ್ದಿತ್ತು. ನಂತರ ಜಾಗ ದೊರೆಯಿತು. ಅಷ್ಟರಲ್ಲಿ ಕೋವಿಡ್ ಎದುರಾಯಿತು. ಹೀಗೆ ನಾನಾ ಅಡೆತಡೆಗಳನ್ನು ದಾಟಿ ಈಗ ₹ 9 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ.

ಹೀಗೆ ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಇಲಾಖೆಯ ಆಸ್ಪತ್ರೆಗಳಿಗೆ ಜಾಗದ ಕೊರತೆ ಮತ್ತು ಗೊಂದಲದ ಕಾರಣ ಕಟ್ಟಡ ಕಾಮಗಾರಿಗಳು ಆಮೆಗತಿಯಲ್ಲಿವೆ.

ಕಾಮಗಾರಿಗೆ ಬೇಕಿದೆ ಒಂದು ವರ್ಷ:

‘ಚಿಕ್ಕಬಳ್ಳಾಪುರದಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಮೊದಲ ಹಂತದಲ್ಲಿ ₹ 2.5 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣ ಹಂತ ಹಂತವಾಗಿ ಬಿಡುಗಡೆ ಆಗುತ್ತದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣವಾಗಿ ಇಲ್ಲಿ ಆರಂಭವಾಗಲು ಇನ್ನೂ ಒಂದು ವರ್ಷ ಆಗಬಹುದು’ ಎಂದು ಆಯುಷ್ ಇಲಾಖೆ ಮೂಲಗಳು ತಿಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.