ಚಿಂತಾಮಣಿ: ನಗರದ ಅಶ್ವಿನಿ ಬಡಾವಣೆಯಲ್ಲಿ ಬೀಗ ಹಾಕಿದ್ದ ಅಕ್ಕಪಕ್ಕದ ಎರಡು ಮನೆಗಳಿಗೆ ಶನಿವಾರ ರಾತ್ರಿ ನುಗ್ಗಿರುವ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಆಭರಣ ಹಾಗೂ ಹಣವನ್ನು ದೋಚಿದ್ದಾರೆ.

ಚೌಡರೆಡ್ಡಿ ಹಾಗೂ ಸುಷ್ಮಾ ಅನಿಲ್ ಕುಮಾರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಎರಡು ಮನೆಯವರು ಕೆಲಸದ ನಿಮಿತ್ತ ಮನೆಗಳಿಗೆ ಬೀಗ ಹಾಕಿಕೊಂಡು ತಮ್ಮ ಊರುಗಳಿಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಚೌಡರೆಡ್ಡಿ ಅವರ ಪತ್ನಿ ಭಾನುವಾರ ಬೆಳಿಗ್ಗೆ ಮನೆಗೆ ಬಂದಾಗ ಬಾಗಿಲು ತೆರೆದಿರುವುದನ್ನು ಕಂಡು
ಗಾಬರಿಯಾಗಿ ಒಳಗೆ ಹೋಗಿ ನೋಡಿದಾಗ ಮನೆಯ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಪಕ್ಕದಲ್ಲಿರುವ ಸುಷ್ಮಾ ಅನಿಲ್ ಕುಮಾರ್ ಮನೆ ಬಾಗಿಲು ಮುರಿದು ಅಲ್ಲಿಯೂ ಸಹ ಇದೇ ರೀತಿ ಕಳ್ಳತನ ಮಾಡಿದ್ದಾರೆ. ಎರಡಿ ಮನೆಗಳಲ್ಲಿ ಒಂದೇ ಗುಂಪು ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರನ್ನು ಕರೆಸಿದ್ದರು.

ಕೆಲಸದ ನಿಮಿತ್ತ ಮನೆಯವರೆಲ್ಲ ಬೀಗ ಹಾಕಿಕೊಂಡು ತಮ್ಮೇಪಲ್ಲಿಗೆ ಹೋಗಿದ್ದೆವು. ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಸುಮಾರು 49 ಗ್ರಾಂ ಬಂಗಾರದ ಒಡವೆಗಳು, 300 ಗ್ರಾಂ ಬೆಳ್ಳಿ ಒಡವೆಗಳು ಹಾಗೂ ₹50 ಸಾವಿರ ಕದ್ದುಕೊಂಡು ಹೋಗಿದ್ದಾರೆ ಎಂದು ಮನೆಯ ನಿವಾಸಿ ಚೌಡರೆಡ್ಡಿ ತಿಳಿಸಿದರು.

ಮನೆಗೆ ಬೀಗ ಹಾಕಿ ಗೊಲ್ಲಪಲ್ಲಿ ಗ್ರಾಮಕ್ಕೆ ಹೋಗಿದ್ದೆವು. ಪಕ್ಕದ ಮನೆಯಂತೆ ನಮ್ಮ ಮನೆಯಲ್ಲೂ ಕಳ್ಳತನವಾಗಿದೆ. ಮನೆಯಲ್ಲಿದ್ದ 8 ಗ್ರಾಂ ತೂಕದ ಬಂಗಾರದ ಒಡವೆ, 35 ಗ್ರಾಂ ಬೆಳ್ಳಿ ಒಡವೆ, ₹30 ಸಾವಿರ ಕಳ್ಳತನವಾಗಿದೆ ಎಂದು ಸುಷ್ಮಾ ಅನಿಲ್ ಕುಮಾರ್ ಹೇಳಿದರು.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.