ಗೌರಿಬಿದನೂರು: ತಾಲ್ಲೂಕಿನ ಹುದುಗೂರು ಬಳಿ ಇಬ್ಬರು ಅಪರಿಚಿತರು ಬಸ್ ನಿರ್ವಾಹಕ ಸತೀಶ್ (35) ಎಂಬವರ ಮೇಲೆ ಬುಧವಾರ ಬೆಳಗ್ಗೆ ಹಲ್ಲೆ ಮಾಡಿದ್ದಾರೆ.

ಮಂಗಳವಾರ ಸಂಜೆ ಗೌರಿಬಿದನೂರು ಮಾರ್ಗದಿಂದ ಗುಡಿಬಂಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆಧಾರ್ ಕಾರ್ಡ್ ಮೇಲೆ ಶಾಯಿ ಚೆಲ್ಲಿದ್ದರಿಂದ ಮುಖ ಕಾಣುತ್ತಿಲ್ಲ, ಮುಂದಿನ ಬಾರಿ ಬೇರೆ ಆಧಾರ್ ಕಾರ್ಡ್ ತರಲು ಬಸ್ ನಿರ್ವಾಹಕ ವಿದ್ಯಾರ್ಥಿನಿಗೆ ಹೇಳಿದ್ದಾನೆ. ಮರುದಿನ ಬೆಳಗ್ಗೆ ಇದೇ ಮಾರ್ಗವಾಗಿ ಹುದುಗೂರು ಬಳಿ ಬಸ್ ಬರುತ್ತಿದ್ದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಲಕನಿಗೆ ಬಸ್ ನಿಲ್ಲಿಸಲು ಹೇಳಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಎದೆ ಭಾಗ ಮತ್ತು ತಲೆ ಭಾಗಕ್ಕೆ ಗಾಯಗಳಾಗಿವೆ. ಟಿಕೆಟ್ ನೀಡುವ ಮೆಷಿನನ್ನು ಜಖಂಗೊಳಿಸಿ ಟಿಕೆಟ್ನ ಹಣವನ್ನು ಅವರೇ ತೆಗೆದುಕೊಂಡಿದ್ದಾರೆ.

ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಸ್ ನಿರ್ವಾಹಕ ಸತೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.