ಬಾಗೇಪಲ್ಲಿ: ಪಟ್ಟಣದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸೂಕ್ತ ನಿರ್ವಹಣೆ ಇಲ್ಲ. ಪಾದಚಾರಿ ರಸ್ತೆ ಒತ್ತುವರಿ, ಚರಂಡಿಗಳಲ್ಲಿ ಹೂಳು ತುಂಬಿ ಸೊಳ್ಳೆಗಳು ಹೆಚ್ಚಾಗಿವೆ. ಕೆರೆ, ಕಾಲುವೆ, ರಾಜಕಾಲುವೆ ಒತ್ತುವರಿ ಆದರೂ ಪುರಸಭೆ, ಕಂದಾಯ, ನೀರಾವರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜೈಭೀಮ್ ಅಖಿಲಭಾರತ ದಲಿತ ಹೋರಾಟ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಜಿ.ಎಲ್.ರಾಮಾಂಜಿನೇಯಪ್ಪ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಬೀದಿಗಳಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿದೆ. ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ. ಪಾದಚಾರಿ ರಸ್ತೆಯನ್ನು ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.

13ನೇ ವಾರ್ಡ್ನ ಅಂಬೇಡ್ಕರ್ ನಗರದಲ್ಲಿ ಸಮರ್ಪಕವಾಗಿ ಸ್ವಚ್ಛತೆ ಮಾಡಿಲ್ಲ. ಗುಣಮಟ್ಟ ಇಲ್ಲದ ರಸ್ತೆ, ಚರಂಡಿ ಮಾಡಲಾಗಿದೆ. ಮುಖ್ಯರಸ್ತೆ, ಬೀದಿಗಳಲ್ಲಿನ ಬೀದಿದೀಪಗಳಲ್ಲಿ ಬೆಳಕು ಕಾಣದೇ ಜನ ಕಗ್ಗತ್ತಲಿನಲ್ಲಿ ಸಂಚರಿಸುತ್ತಿದ್ದಾರೆ. ಅಂಬೇಡ್ಕರ್ ನಗರದ ಸ್ಮಶಾನಕ್ಕೆ ಸಂಚರಿಸುವ ರಸ್ತೆಯ 3ನೇ ವಾರ್ಡ್ನಲ್ಲಿ ಹಾದುಹೋಗುವ ರಸ್ತೆ ನಕಾಶೆಯಲ್ಲಿ 25 ಅಡಿ ರಸ್ತೆ ಇದೆ. ಪೌರಕಾರ್ಮಿಕರು ಸ್ವಚ್ಛತೆ ಸಂದರ್ಭದಲ್ಲಿ ಆರೋಗ್ಯ ಕವಚ ಹಾಕಿಸದೇ ಕೆಲಸ ಮಾಡಿಸುತ್ತಿರುವುದು ಖಂಡನೀಯ ಎಂದರು.

ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಸಾಗುವಳಿ ಚೀಟಿಗಳನ್ನು ನೀಡಿದ ರೈತರಿಗೆ ದುರಸ್ತಿ ಮಾಡಿಸಬೇಕು. ದಲಿತರಿಗೆ ಸಾಗುವಳಿ ಚೀಟಿಯ ಜೊತೆ ಭೂಮಿ ತೋರಿಸದೆ ವಂಚನೆ ಮಾಡುತ್ತಿರುವುದು ಖಂಡನೀಯ ಎಂದರು.

ತಾಲ್ಲೂಕಿನ ಕೊತ್ತಕೋಟೆ, ದಾಸಯ್ಯಗಾರಿಪಲ್ಲಿ, ಪಾತಬಾಗೇಪಲ್ಲಿ, ಗುಂಡ್ಲಪಲ್ಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ಜಾಗ, ರಸ್ತೆ ಇಲ್ಲ. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ಜನರಿಗೆ ತಲುಪಿಸಲು ತಾಲ್ಲೂಕು ಆಡಳಿತ ಯಂತ್ರಾಂಗ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಮೂಲ ಸೌಲಭ್ಯ ಕಲ್ಪಿಸಲು, ಪಟ್ಟಣದ ಸಮಸ್ಯೆಗಳ ಹಾಗೂ ಸ್ಮಶಾನ ಜಾಗ, ರಸ್ತೆ, ಕೆರೆ, ರಾಜಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಸಮಿತಿಯ ತಾಲ್ಲೂಕು ಪ್ರಧಾನಕಾರ್ಯದರ್ಶಿ ಮುನಿಸ್ವಾಮಿ (ಸಾಯಿ) ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ, ಹೊರಗುತ್ತಿಗೆ ನೌಕರರ ಪರಿಸ್ಥಿತಿ ದಯನೀಯ ಆಗಿದೆ. ಹೊರಗುತ್ತಿಗೆ ದುಡಿಯುತ್ತಿರುವ ನೌಕರರಿಗೆ ಸೇವಾ ಭದ್ರತೆ ಇಲ್ಲ. ಅಡುಗೆ ಸಿಬ್ಬಂದಿಗೆ ವಿಶ್ರಾಂತಿ ಇಲ್ಲ. ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಪದ್ಧತಿಯನ್ನು ಸರ್ಕಾರ ರದ್ದು ಮಾಡಬೇಕು. ನೌಕರರನ್ನು ಖಾಯಂ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ನಿಲಯಗಳಲ್ಲಿ ಪೌಷ್ಟಿಕ ಆಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯ ಉಪಾಧ್ಯಕ್ಷ ನಾಗಪ್ಪ, ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಆನಂದ್, ಪದಾಧಿಕಾರಿ ವೆಂಕಟೇಶ್, ಎನ್.ಮೂರ್ತಿ, ನರೇಂದ್ರ, ಅನಿಲ್ಕುಮಾರ್, ವೆಂಕಟೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.