ಬಾಗೇಪಲ್ಲಿ: ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆಗೆ ಹೆಬ್ಬಾಳ ನಾಗವಾರದ ಏತ ನೀರಾವರಿ ಮೂಲಕ ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರು ಹರಿದಿದೆ. ಇದರಿಂದಾಗಿ 40 ವರ್ಷಗಳಿಂದ ಆಟದ ಮೈದಾನದಂತೆ ಇದ್ದ ಕೆರೆಯಲ್ಲಿ ನೀರು ಸಂಗ್ರಹ ಆಗಿದೆ. ಇದೀಗ ಕೆರೆ ಕೋಡಿ ಹರಿದಿರುವುದು ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.

ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಯಲ್ಲಂಪಲ್ಲಿ, ಮಿಟ್ಟೇಮರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಗ್ರಾಮಗಳು ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಇವೆ. ಜೊತೆಗೆ ತಾಂಡಗಳು ಇವೆ. ಗ್ರಾಮಗಳಲ್ಲಿರುವ ಜನರು, ಕೃಷಿ ಮತ್ತು ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದಾರೆ. ಸೀಮೆಹಸುಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳು ಇಲ್ಲದ ಕಾರಣ ಅಂತರ್ಜಲದ ಮಟ್ಟ ಕುಸಿದಿದೆ. 1,200 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಜನರು ಹಾಗೂ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಿದೆ. ತೆರೆದಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರು ಸಿಗದೆ ರೈತರು ಕೃಷಿ ಹಾಗೂ ತರಕಾರಿಗಳ ಬೆಳೆಗಳು ಬೆಳೆಯಲು ಆಗುತ್ತಿಲ್ಲ. ರಾಸುಗಳಿಗೆ ಹುಲ್ಲು ಹಾಗೂ ಕುಡಿಯುವ ನೀರಿನ ಕೊರತೆ ಇರುವುದರಿಂದ, ಹೈನುಗಾರಿಕೆಗೆ ಭಾರಿ ಹೊಡೆತ ಬಿದ್ದಿತ್ತು.

ನೀರಿನ ಅಂಶದಲ್ಲಿ ಪ್ಲೋರೈಡ್ ಅಂಶ ಅಧಿಕವಿದ್ದು, ಈ ಭಾಗದಲ್ಲಿ ಪ್ಲೊರೊಸಿಸ್ ರೋಗ ಹೆಚ್ಚಾಗಿದೆ. ಯುವಕ, ಯುವತಿಯರಲ್ಲಿ ರಕ್ತದ ಹೀನತೆ ಆಗಿದೆ. ನೀರಿನ ಕೊರತೆಯಿಂದ ಸದೃಢರಾಗಿ ಬೆಳೆಯಲು ಆಗದೆ ನಿಶಕ್ತರಾಗಿದ್ದಾರೆ. ಇಂಥ ಬಯಲುಸೀಮೆ ತಾಲ್ಲೂಕಿಗೆ ಶಾಶ್ವತವಾಗಿ ನೀರಾವರಿ ಕಲ್ಪಿಸಲು 30 ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಒತ್ತಾಯದ ಮೇರೆಗೆ 24 ಗ್ರಾಮಗಳ ಕೆರೆಗಳಿಗೆ ಹೆಬ್ಬಾಳ, ನಾಗವಾರದಿಂದ ಏತ ನೀರಾವರಿ ಮೂಲಕ ಸಂಸ್ಕರಿಸಿದ ನೀರು ಹರಿದಿದೆ. ತಾಲ್ಲೂಕಿನ ಮಲ್ಲಿಗುರ್ಕಿ, ಆಚೇಪಲ್ಲಿ ಗ್ರಾಮಗಳ ಕೆರೆಗಳಿಗೆ ಹರಿದ ನೀರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ನೀರು ಹರಿಯುತ್ತಿರುವುದರಿಂದ ಇದೀಗ ಕೆರೆಗಳಲ್ಲಿ ನೀರಿನ ಸಂಗ್ರಹದ ಮಟ್ಟ ಹೆಚ್ಚಾಗಿದೆ.

ಕಳೆದ 40 ವರ್ಷಗಳಿಂದ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆ ತುಂಬಿರಲಿಲ್ಲ. ಇದರಿಂದಾಗಿ ಈ ಕೆರೆಯ ಜಾಗವು ಆಟದ ಮೈದಾನದಂತಿಗಿತ್ತು. ಕಳೆ, ಮುಳ್ಳುಗಳಿಂದ ಕೂಡಿದ ಕೆರೆಗೆ ಕಳೆದ ಒಂದೂವರೆ ತಿಂಗಳಿನಿಂದ ಎಚ್.ಎನ್.ವ್ಯಾಲಿ ನೀರು ಹರಿದಿದೆ. ನೀರಿನ ಮಟ್ಟ ಹೆಚ್ಚಾಗಿ, ಕೆರೆಯ ಕೋಡಿ ಹರಿದಿರುವುದರಿಂದ, ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ ಎಂದು ಪ್ರಭಾಕರ ರೆಡ್ಡಿ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಸಬಾ ಹೋಬಳಿಯ 24 ಗ್ರಾಮಗಳ ಕೆರೆಗಳಿಗೆ ಎಚ್.ಎನ್. ವ್ಯಾಲಿಯ ಸಂಸ್ಕರಿಸಿದ ನೀರು ಹರಿದ ಕಾರಣದಿಂದ ಅಂತರ್ಜಲದ ಮಟ್ಟ ವೃದ್ಧಿಯಾಗಲಿದೆ.
ಪಿ. ಮಂಜುನಾಥರೆಡ್ಡಿ, ರೈತ

ಎಚ್.ಎನ್ ವ್ಯಾಲಿಯಿಂದ 24 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಈ ನೀರು ಬಳಕೆಗೆ ಯೋಗ್ಯವಲ್ಲವೆಂದು ಕೆಲವರು ಸುಳ್ಳಿನ ಕಂತೆ ಹಬ್ಬಿಸುತ್ತಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ.
ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.