ಚಿಂತಾಮಣಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಕರಾದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್
ಮಂಜೂರಾಗಿದ್ದ ಶಾಲೆ ವಾಪಸ್
ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಮಾತ್ರ ವಸತಿ ಶಾಲೆ ಇಲ್ಲ. ಹಿಂದೆ ನಾನು ಶಾಸಕನಾಗಿದ್ದಾಗ ದೊಡ್ಡಗಂಜೂರು ಗ್ರಾಮಕ್ಕೆ ವಸತಿ ಶಾಲೆ ಮಂಜೂರು ಮಾಡಿಸಿ 10 ಎಕರೆ ಜಾಗ ಗುರುತಿಸಿದ್ದೆ. ನಂತರ ರಾಜಕೀಯ ಬದಲಾವಣೆ ಆಗಿದ್ದರಿಂದ ಶಾಲೆ ಪ್ರಾರಂಭಿಸಲು ಸಂಬಂಧಪಟ್ಟವರು ಸೂಕ್ತ ಗಮನಹರಿಸದ ಕಾರಣ ಮಂಜೂರಾಗಿದ್ದ ಶಾಲೆ ನಿಗದಿತ ಅವಧಿಯಲ್ಲಿ ಪ್ರಾರಂಭಿಸದ ಕಾರಣ ಲ್ಯಾಪ್ಸ್ ಆಗಿದೆ. ಹಿಂದೆ ಗುರುತಿಸಿದ್ದ 10 ಎಕರೆ ಜಮೀನನ್ನು ಮಂಜೂರು ಮಾಡಿಸಲು ಪ್ರಸ್ತಾವ ಸಲ್ಲಿಸಿದರೆ ಮಂಜೂರಾಗಿದ್ದ ಶಾಲೆ ಲ್ಯಾಪ್ಸ್ ಆಗಿರುವ ವಿಷಯ ಗೊತ್ತಾಯಿತು. ಮುಂದಿನ ಬಜೆಟ್‌ನಲ್ಲಿ ವಸತಿ ಶಾಲೆಯನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.