ಗುರುವಾರ , ಏಪ್ರಿಲ್ 15, 2021
20 °C

ಹನುಮಂತಪುರ: ಕುರಿಗಳ ನಿಗೂಢ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಹೊರವಲಯದ ಹನುಮಂತಪುರ ಗ್ರಾಮದಲ್ಲಿ 8 ಕುರಿಗಳು ಸೋಮವಾರ ರಾತ್ರಿ ಯಾವುದೋ ಪ್ರಾಣಿಯ ದಾಳಿಯಿಂದ ಮೃತಪಟ್ಟಿದ್ದು, ತೋಳವಿರಬಹುದು ಎಂದು ಕುರಿಗಳ ಮಾಲೀಕ ಹನುಮಂತಪುರದ ರಾಜು ಅಂದಾಜಿಸಿದ್ದಾರೆ.

‘ನಮ್ಮ ಭಾಗದಲ್ಲಿ ತೋಳಗಳು ಇಲ್ಲ. ಬಿಜಿಎಸ್ ವಿದ್ಯಾಸಂಸ್ಥೆಯ ಹತ್ತಿರದ ನೀಲಗಿರಿ ತೋಪಿನಲ್ಲಿ ಕಸಾಯಿಖಾನೆಯ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ಅವನ್ನು ತಿಂದುಕೊಂಡು ಹಲವು ನಾಯಿಗಳು ಚೆನ್ನಾಗಿ ಬಲಿತುಕೊಂಡಿವೆ. ಅವುಗಳು ಬಹುಶಃ ಬಂದು ದಾಳಿ ನಡೆಸಿರಬಹುದು’ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಿದ್ದಾರೆ.

ಸ್ಥಳಕ್ಕೆ ಕಸಬಾ ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗ ನಾಗರಾಜ್, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು