ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸಸಾಗರದಲ್ಲಿ ಸಣ್ಣ ನೀರಾವರಿ ಇಲಾಖೆಯು ಈಗಾಗಲೇ ಬೋಟಿಂಗ್ ಆರಂಭಕ್ಕೆ ಅನುಮತಿ ನೀಡಿದೆ. ಈಗ ಜಿಲ್ಲೆಯಲ್ಲಿ ಮತ್ತೊಂದು ಬೋಟಿಂಗ್ ಯೋಜನೆಗೆ ಚಾಲನೆ ದೊರೆಯಲು ಕ್ಷಣಗಣನೆ ಆರಂಭವಾಗಿದೆ.

ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯಲ್ಲಿಯೂ ಶೀಘ್ರದಲ್ಲಿಯೇ ಬೋಟಿಂಗ್ ಆರಂಭವಾಗಲಿದೆ. ಇದು ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ ಜಾರಿ ಆಗುತ್ತಿರುವ ಮೊದಲ ದೋಣಿ ವಿಹಾರ ಯೋಜನೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಮೂಡಲಿದೆ.

ಪ್ರವಾಸೋದ್ಯಮ ಇಲಾಖೆಯಿಂದ ‘ಅಕ್ವಾ ಎಸ್ಕೇಪ್’ ಸಂಸ್ಥೆಯು ಇಲ್ಲಿ ದೋಣಿ ವಿಹಾರ ನಡೆಸಲು ಕಾರ್ಯಾದೇಶ ಪಡೆದಿದೆ. ಅ.8ಕ್ಕೆ ಅನ್ವಯವಾಗುವಂತೆ ಇಲಾಖೆ ಕಾರ್ಯಾದೇಶ ನೀಡಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ದಿನ ನಿಗದಿ ಮಾಡಿಕೊಂಡು ಅಧಿಕೃತವಾಗಿ ದೋಣಿ ವಿಹಾರಕ್ಕೆ ಚಾಲನೆ ನೀಡಲು ಸಿದ್ಧತೆಗಳು ಆರಂಭವಾಗಿವೆ.

ಗೌರಿಬಿದನೂರಷ್ಟೇ ಅಲ್ಲ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಮೇಲೆಯೂ ವಾಟದ ಹೊಸಹಳ್ಳಿ ಕೆರೆಯ ದೋಣಿ ವಿಹಾರ ಯೋಜನೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಈಗಾಗಲೇ ಕೆರೆಯು ತನ್ನ ಸೌಂದರ್ಯದ ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ.

117 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಕೆರೆಯು 345 ಎಂಸಿಎಫ್ಟಿ ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದೆ. 17 ಮೀಟರ್ ಏರಿ ಎತ್ತರವಿದೆ. ಮೇಲ್ಭಾಗದಲ್ಲಿ 4 ಅಡಿ ಅಗಲವಿದೆ. ಏರಿಯು 510 ಮೀಟರ್ ಉದ್ದವಿದೆ. 981.78 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಕೆರೆ ಹೊಂದಿದೆ.

ವರ್ಷ ಪೂರ್ತಿ ಇಲ್ಲಿ ಸಮೃದ್ಧವಾಗಿ ನೀರು ಇರುತ್ತದೆ. ಅಲ್ಲದೆ ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ತುಂಬಿಸುವ ಭರವಸೆ ಸಹ ನೀಡಿದ್ದಾರೆ. ಎತ್ತಿನಹೊಳೆ ನೀರು ಈ ಕೆರೆಯನ್ನು ತುಂಬುವುದು ಖಚಿತ ಎನ್ನುತ್ತವೆ ಮೂಲಗಳು. ಈ ಎಲ್ಲ ಕಾರಣದಿಂದ ಕೆರೆಯಲ್ಲಿ ದೋಣಿ ವಿಹಾರ ಆರಂಭ ಪ್ರಮುಖ ಯೋಜನೆಯಾಗಿದೆ.

ಇಲ್ಲಿ 10 ದೋಣಿಗಳು ವಿಹಾರಕ್ಕೆ ಇರಬೇಕು ಎಂದು ಪ್ರವಾಸೋದ್ಯಮ ಇಲಾಖೆ ‘ಅಕ್ವಾ ಎಸ್ಕೇಪ್’ ಸಂಸ್ಥೆಗೆ ಸೂಚಿಸಿದೆ. ಆದರೆ ಪ್ರವಾಸಿಗರ ಭೇಟಿ ಮತ್ತು ವಹಿವಾಟು ದೋಣಿಗಳ ಸಂಖ್ಯೆಯನ್ನು ನಿರ್ಧರಿಸಲಿದೆ.

ಮೀನುಗಾರಿಕಾ ಇಲಾಖೆಯು ಈ ಕೆರೆಯನ್ನು ಮೀನು ಸಾಕಾಣಿಕೆಗೆ ಟೆಂಡರ್ ನೀಡುತ್ತದೆ. 4 ರಿಂದ 5 ಲಕ್ಷ ಮೀನುಗಳನ್ನು ಸಾಕಿ ಟೆಂಡರ್ ಮೂಲಕ ಹರಾಜು ನಡೆಸುವರು. ಈಗಲೂ ಇಲ್ಲಿ ಮೀನುಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ. ಕೆರೆಯಲ್ಲಿ ಮೀನುಗಳನ್ನು ಹಿಡಿದು ಅಲ್ಲಿಯೇ ಆಹಾರ ತಯಾರಿಸಿ ನೀಡುವ ಆಲೋಚನೆಯೂ ಇಲಾಖೆಗಳಿಗೆ ಇದೆ ಎನ್ನುತ್ತವೆ ಮೂಲಗಳು.

ವಾಟದಹೊಸಹಳ್ಳಿ ಕೆರೆಯಲ್ಲಿ ಬೋಟಿಂಗ್ ಆರಂಭವಾದರೆ ಸುತ್ತಲಿನ ಪ್ರದೇಶದಲ್ಲಿ ಒಂದಿಷ್ಟು ಉದ್ಯೋಗ ಸೃಷ್ಟಿಗೂ ಅವಕಾಶಗಳಾಗುತ್ತದೆ.

‘ಜಿಲ್ಲೆಯಲ್ಲಿ ಇಲಾಖೆಯಿಂದ ಅನುಷ್ಠಾವಾಗುತ್ತಿರುವ ಮೊದಲ ಯೋಜನೆ ಇದು. ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಬೋಟಿಂಗ್ ನಡೆಸಲಾಗುತ್ತದೆ. ಉದ್ಘಾಟನೆಗೂ ಮುನ್ನ ಸಭೆ ನಡೆಸಿ ದರ ನಿಗದಿ ಮತ್ತಿತರ ವಿಚಾರಗಳ ಬಗ್ಗೆ ನಿರ್ದೇಶನ ನೀಡಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ತಿಳಿಸಿದರು.

‘ಎಷ್ಟು ಜನರು ಬರುತ್ತಾರೆ ಎನ್ನುವುದು ಗೊತ್ತಿಲ್ಲ. ಶನಿವಾರ ಮತ್ತು ಭಾನುವಾರ ಕನಿಷ್ಠ 100 ಜನರು ಬರಬಹುದು ಎಂದುಕೊಂಡಿದ್ದೇವೆ. ಆರಂಭವಾದ ನಂತರ ವಾಸ್ತವ ತಿಳಿಯಲಿದೆ. ಇಲ್ಲಿ ಬೋಟಿಂಗ್ ಆರಂಭ ಜಿಲ್ಲೆಯ ಪ್ರವಾಸೋದ್ಯಮದ ವಿಚಾರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ’ ಎಂದು ತಿಳಿಸಿದರು.

ವಾಟದಹೊಸಹಳ್ಳಿ ಕೆರೆ ಗೌರಿಬಿದನೂರು ತಾಲ್ಲೂಕಿನಲ್ಲಿ ಅತಿ ದೊಡ್ಡ ಕೆರೆ ಎನಿಸಿದೆ. ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಬೆಟ್ಟದ ಸಾಲಿನಲ್ಲಿ ಇರುವುದರಿಂದ ಮಳೆ ನೀರು ನೇರವಾಗಿ ಕೆರೆ ಸೇರುತ್ತದೆ. ಗುಡಿಬಂಡೆ ಕೆರೆ ತುಂಬಿದ ನಂತರ ಅಪಾರ ಪ್ರಮಾಣದ ಕೋಡಿ ನೀರು ಈ ಕೆರೆಗೆ ಹರಿದು ಬರುತ್ತವೆ. ಇದರಿಂದ ವರ್ಷ ಪೂರ್ತಿ ನೀರಿಗೆ ಯಾವುದೇ ಕೊರತೆ ಇಲ್ಲ.

ಈ ಕೆರೆ ಕೋಡಿ ಹರಿದರೆ ಮಣಿವಾಲ, ಮುದಲೋಡು ಜೀಲಾಕುಂಟೆ, ನಕ್ಕಲಹಳ್ಳಿ, ಗೊಲ್ಲಹಳ್ಳಿ ಕೆರೆಗಳತ್ತ ನೀರು ಹರಿಯುತ್ತದೆ. ಈ ಎಲ್ಲ ಕಾರಣದಿಂದ ಜಿಲ್ಲೆಯಲ್ಲಿಯೇ ವಾಟದಹೊಸಹಳ್ಳಿ ಕೆರೆ ಪ್ರಮುಖವಾಗಿದೆ.

‘ಹೋಟೆಲ್ ಆರಂಭಕ್ಕೂ ಯೋಜನೆ’

ಬೋಟಿಂಗ್ ಸ್ವೀಡ್ ಬೋಟಿಂಗ್ ಮತ್ತು ಕಯಾಕಿಂಗ್ ವಾಟದಹೊಸಹಳ್ಳಿ ಕೆರೆಯಲ್ಲಿ ನಡೆಯಲಿವೆ. ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳು ಇಲಾಖೆ ಮುಂದಿವೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ‘ಪ್ರಜಾವಾಣಿ’ಗೆ ತಿಳಿಸಿದರು. ಕೆರೆ ಸಮೀಪದಲ್ಲಿಯೇ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹೋಟೆಲ್ ಆರಂಭಿಸುವ ಯೋಜನೆಯೂ ಇದೆ. ಇಲ್ಲಿ ಬೋಟಿಂಗ್ ಆರಂಭವಾಗುವುದು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ. ಆರ್ಥಿಕ ಚಟುವಟಿಕೆಗಳು ಸಹ ಉತ್ತಮಗೊಳ್ಳುತ್ತವೆ ಎಂದು ಹೇಳಿದರು.

ನೀರಿನ ಜಟಾಪಟಿ

ವಾಟದಹೊಸಹಳ್ಳಿ ಕೆರೆಯ ನೀರಿನ ವಿಚಾರವಾಗಿ ಎದ್ದಿರುವ ವಿವಾದ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗೌರಿಬಿದನೂರು ನಗರಕ್ಕೆ ವಾಟದಹೊಸಹಳ್ಳಿ ಕೆರೆ ನೀರನ್ನು ಹರಿಸಲು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮನಸ್ಸು ಮಾಡಿದ್ದಾರೆ. ಆದರೆ ಈ ವಿಚಾರವಾಗಿ ಪರ–ವಿರೋಧದ ಅಲೆ ಎದ್ದಿತ್ತು. ಪ್ರತಿಭಟನೆಗಳು ನಡೆದಿದ್ದವು. ‘ವಾಟದಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ನೀರು ಹರಿಸುತ್ತೇನೆ’ ಎಂದು ಶಾಸಕರು ಭರವಸೆ ಸಹ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.