ಚಿಕ್ಕಮಗಳೂರು: ‘ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ತಾಲ್ಲೂಕು ಸಮಾವೇಶದಲ್ಲಿ ಸಮಿತಿಯ ಮುಂದಿನ ಹೋರಾಟದ ಬಗ್ಗೆ ನಿರ್ಣಯಕ ಕೈಗೊಳ್ಳಲಾಗಿದೆ. ಪಕ್ಷದ ತಾಲ್ಲೂಕು ಸಮಿತಿ ರಚನೆ ಮಾಡಲಾಗಿದೆ’ ಎಂದು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಹೇಳಿದರು.

ಬುಧವಾರದ ನಡೆದ ಸಮಾವೇಶದಲ್ಲಿ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂಬುದು ಸೇರಿ ಹಲವು ಒತ್ತಾಯಗಳನ್ನು ಮುಂದಿಟ್ಟು ಹೋರಾಟ ರೂಪಿಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ನಗರದ ಬಡಾವಣೆಗಳಿಗೆ ಮತ್ತು ರಸ್ತೆಗಳಿಗೆ ನಾಮಫಲಕ ಅಳವಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು, ಅಮೃತ ಯೋಜನೆ ಬಗ್ಗೆ ತನಿಖೆ ನಡೆಸಬೇಕು. ಸುಮಾರು 20 ವರ್ಷಗಳಿಂದ ನಗರದ ಯುಜಿಡಿ(ಒಳಚರಂಡಿ) ಕಾಮಗಾರಿ ಇನ್ನೂ ಸಂಪೂರ್ಣ ಆಗಿಲ್ಲ, ಕಾಮಗಾರಿ ನಡೆದಿರುವ ಕಡೆ ಕಳಪೆ ಆಗಿದೆ. ನಗರದಲ್ಲಿ ವಾಹನ ನಿಲುಗಡೆ ಅವ್ಯವಸ್ಥೆ ಆಗಿದೆ. ಇದರ ಬಗ್ಗೆ ನಗರಸಭೆ ಕ್ರಮ ತೆಗೆದುಕೊಳ್ಳಬೇಕು. ಈ ಎಲ್ಲಾ ವಿಷಯಗಳ ಕುರಿತು ಹೋರಾಟ ರೂಪಿಸಲು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ’ ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ನೂತನ ತಾಲ್ಲೂಕು ಸಮಿತಿ ರಚನೆ ಮಾಡಲಾಯಿತು. ತಾಲ್ಲೂಕು ಕಾರ್ಯದರ್ಶಿಯಾಗಿ ಕೆರೆಮಕ್ಕಿ ರಮೇಶ್, ತಾಲ್ಲೂಕು ಸಹ ಕಾರ್ಯದರ್ಶಿಗಳಾಗಿ ಹೆಡದಾಳ್ ಕುಮಾರ್, ಸಿ.ಸಿ ಮಂಜೇಗೌಡ, ಖಜಾಂಚಿ ತಂಪಿತಗೌಡ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ರಮೇಶ್, ಜೆರ್ಮಿ ಲೋಬೋ, ಜಯನಂದ ದಾನಿಹಳ್ಳಿ, ರವಿ ಎಸ್. ಗುಡ್ಡದೂರು, ಶಿವಾನಂದ ಹಚ್ಚಡಮನೆ, ತಾರಾನಾಥ್ ಗಾಳಿಗುಡ್ಡೆ ಇವರನ್ನು ಆಯ್ಕೆ ಮಾಡಲಾಗಿದೆ.

ತಾಲ್ಲೂಕು ಸಮಿತಿ ಸದಸ್ಯರಾಗಿ ರಾಜು ಶಿರವಾಸೆ, ಲಕ್ಷ್ಮಿ ದಾನಿಹಳ್ಳಿ, ಸಂಜೀವ ಮಲ್ಲಂದೂರು, ಸತ್ತಿಶ್ ಮಲ್ಲಂದೂರು, ಅಪ್ಪು ಮಲ್ಲಂದೂರು, ಹರೀಶ್ ವಾಟಿಗನಹಳ್ಳಿ, ಕೊರಗಪ್ಪ ಜಾಗರ, ವೀರಾಚಾರ್ ಕಂಬಿಹಳ್ಳಿ, ವಿಜಯಕುಮಾರ್ ದಂಟರಮಕ್ಕಿ, ವಿಶ್ವಾನಾಥ್ ಮಾಚಗೊಂಡನಹಳ್ಳಿ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ಬರಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನಕ್ಕೆ ಚಿಕ್ಕಮಗಳೂರು ತಾಲ್ಲೂಕಿನಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜೆರ್ಮಿ ಲೋಬೋ, ಜಿ.ರಮೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.