ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅರೇಬಿಕಾ ಕಾಫಿಯು ಅವಧಿಗೂ ಮೊದಲೇ ಹಣ್ಣಾಗ ತೊಡಗಿದ್ದು, ಬೆಳೆಗಾರರಿಗೆ ಈ ಬಾರಿ ಕಾಫಿ ಕಹಿಯಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಫೆಬ್ರುವರಿ ಅಂತ್ಯದಲ್ಲಿ ಕಾಫಿ ಹೂವಿನ ಮಳೆಯು ಹದವಾಗಿ ಸುರಿದಿದ್ದರಿಂದ ಕಾಫಿ ಫಸಲಿಗೆ ಉತ್ತಮವಾಗಿತ್ತು. ಅದರಲ್ಲೂ ಮಳೆ ಆಶ್ರಿತ ಅರೇಬಿಕಾ ತಳಿಗೆ ಕಾಫಿ ಹೂವಿನ ಮಳೆಯು ಅತ್ಯುತ್ತಮವಾಗಿ ಹದ ಉಂಟು ಮಾಡಿತ್ತು. ಹೂವಿನ ಮಳೆಯಿಂದ ಅರೇಬಿಕಾ ಕಾಫಿಯು ಅವಧಿಗೆ ಮೊದಲೇ ಹೀಚುಕಟ್ಟಲು ಪ್ರಾರಂಭಿಸಿತ್ತು.

ಮೇ 23ರಿಂದ ಪ್ರಾರಂಭವಾದ ಮಳೆ ಎಡಬಿಡದೇ ಸುರಿಯುತ್ತಿದ್ದು, ಕಳೆದ ಒಂದುವಾರ ಮಳೆ ಕಣ್ಮರೆಯಾಗಿ ಬಿಸಿಲು ಕಾಣಿಸಿಕೊಂಡಿದ್ದರಿಂದ ಬಲಿತ್ತಿದ್ದ ಕಾಫಿ ಹಣ್ಣಾಗ ತೊಡಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯು ಹಣ್ಣಾಗುತ್ತಿರುವ ಕಾಫಿಗೆ ಹೊಡೆತವಾಗುತ್ತಿದ್ದು, ಹಣ್ಣುಗಳು ಕಳಚಿ ಬೀಳುವ ಆತಂಕ ಉಂಟಾಗಿದೆ. ಹಣ್ಣಾಗುತ್ತಿರುವ ಕಾಫಿಯನ್ನು ಮಳೆಯಿಂದ ಕೊಯ್ಲು ಮಾಡಲೂ ಸಾಧ್ಯವಾಗದೇ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

‘ಅರೇಬಿಕಾ ಯಾವಾಗಲೂ ಸೆಪ್ಟೆಂಬರ್ ಅಂತ್ಯದ ಬಳಿಕ ಹಣ್ಣಾಗುತ್ತದೆ. ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ನೀರಾಯಿಸಿದ್ದ ತೋಟಗಳಲ್ಲಿ ಅವಧಿಗೂ ಮೊದಲೇ ಶೇ 5ರಿಂದ 8ರಷ್ಟು ಹಣ್ಣಾಗುತ್ತಿದೆ. ಮಳೆ ಕಡಿಮೆಯಾದರೆ ಹೆಚ್ಚೇನು ನಷ್ಟವಾಗದು. ಆದರೆ, ಹದಿನೈದು ದಿನದೊಳಗೆ ಮಳೆ ಬಿಡುವು ನೀಡದಿದ್ದರೆ ಹಣ್ಣಾಗಿರುವ ಕಾಫಿ ನೆಲಕಚ್ಚಿ ನಷ್ಟ ಉಂಟು ಮಾಡುತ್ತದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಗಿಡ್ಡಯ್ಯ.

ಇಳಿಕೆ ಕಂಡಿದ್ದ ಕಾಫಿ ಬೆಲೆಯು ಚೇತರಿಕೆಯತ್ತ ಸಾಗುತ್ತಿದ್ದಂತೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಅವಧಿಗೂ ಮೊದಲೇ ಕಾಫಿ ಹಣ್ಣಾಗುತ್ತಿರುವುದು ಪುನಃ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಅತಂತ್ರ ಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಹಣ್ಣಾಗಿರುವ ಕಾಫಿ ಉದುರುವ ಆತಂಕ ಮಳೆ ಕಡಿಮೆಯಾಗದಿದ್ದರೆ ನಷ್ಟ ಹೆಚ್ಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.