ಮಂಗಳವಾರ, ಸೆಪ್ಟೆಂಬರ್ 28, 2021
25 °C
ಜಿ.ಟಿ.ದೇವೇಗೌಡ ಅವರಿಗೆ ಸೂಕ್ತ ಆದ್ಯತೆ, ಗೌರವ ಕೊಟಿಲ್ಲ ಎಂದರೆ ಅದು ತಪ್ಪು ಎಂದ ಜೆಡಿಎಸ್ ನಾಯಕ

ಜಿ.ಟಿ.ದೇವೇಗೌಡ ಜೆಡಿಎಸ್‌ ತೊರೆಯಲು ಬಿಡಬಾರದು: ವೈಎಸ್‌ವಿ ದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ ಪಕ್ಷವನನ್ನು ತೊರೆಯಲು ಬಿಡಬಾರದು. ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರು ಕರೆಸಿ ಮಾತನಾಡಿ, ಭಾವನೆಗಳನ್ನು ಅರ್ಥಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿ.ಟಿ.ದೇವೇಗೌಡ ಅವರು ಒಂದು ಶಕ್ತಿ. ಅವರು ಪಕ್ಷದಿಂದ ಹೊರನಡೆದರೆ ಪಕ್ಷ ನಷ್ಟವಾಗುತ್ತದೆ. ಅವರು ಮೂಲ ಜನತಾ ಪರಿವಾರದವರು. ಹೀಗಾಗಿ, ಅವರು ಪಕ್ಷದಲ್ಲಿ ಉಳಿಯುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.

‘ಜಿ.ಟಿ.ದೇವೇಗೌಡ ಅವರಿಗೆ ಸೂಕ್ತ ಆದ್ಯತೆ, ಗೌರವ ಕೊಟಿಲ್ಲ ಎಂದರೆ ಅದು ತಪ್ಪು. ಅವರಂಥ ಹಿರಿಯರನ್ನು ಕಡೆಗಣಿಸಿ ಇನ್ನಾರಿಗೋ ಆದ್ಯತೆ ಕೊಟ್ಟು ವೈಭವೀಕರಿಸಿದಾಗ ಅವರ ಮನಸ್ಸಿಗೆ ನೋವಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು