ಕಳಸ: ಪಟ್ಟಣದಲ್ಲಿ ಮೇ 18ರಂದು ನಡೆಯುವ ರಾಜ್ಯ ಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

ಚಂದ್ರನಾಥ ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ ಧರಣೇಂದ್ರಯ್ಯ ಮಾತನಾಡಿ, ‘ಚಂದ್ರನಾಥ ಬಸದಿ ಪಂಚಕಲ್ಯಾಣದ ಸಂದರ್ಭದಲ್ಲಿ ವಿಶಿಷ್ಟಪೂರ್ಣವಾದ ಜೈನ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಸಾಹಿತ್ಯ ಪರಿಷತ್ತು ಇಂಗಿತ ವ್ಯಕ್ತಪಡಿಸಿತು. ಜೀರ್ಣೋದ್ಧಾರ ಸಮಿತಿಯ ಸಹಕಾರದೊಂದಿಗೆ ಸಾಹಿತ್ಯ ಸಮ್ಮಳನ ನಡೆಯಲಿದೆ’ ಎಂದರು.

ಸಾಹಿತ್ಯ ಪರಿಷತ್ತಿನ ಕಳಸ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ಚಂದ್ರ ಮಾತನಾಡಿ, ‘ಸಮ್ಮೇಳನಾಧ್ಯಕ್ಷ ಶ್ರೀವರ್ಮ ಹೆಗ್ಗಡೆ ಅವರ ಮೆರವಣಿಗೆ ಅಂದು ಬೆಳಿಗ್ಗೆ 7.30ಕ್ಕೆ ನಡೆಯಲಿದೆ.ನಂತರ ಭೈರವರಸ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಇತಿಹಾಸ, ಕವಿ ಗೋಷ್ಠಿ ನಡೆಯಲಿದೆ ಎಂದರು.

ಮಧ್ಯಾಹ್ನ 2 ಗಂಟೆಗೆ ಸಮ್ಮೇಳನದ ಸಮಾರೋಪ ನಡೆಯಲಿದೆ. ಶ್ರೀವರ್ಮ ಹೆಗ್ಗಡೆ ಅಧ್ಯಕ್ಷ ಭಾಷಣ ಮಾಡುವರು. ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು 18 ಜನರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

ಜೀರ್ಣೋದ್ಧಾರ ಸಮಿತಿಯ ನಿರ್ಮಲ್ ಕುಮಾರ್, ಅಜಿತ್, ಸುರೇಶ್, ಧರಣೇಂದ್ರ, ಹರ್ಷೇಂದ್ರ, ಅಣ್ಣಯ್ಯ, ಜ್ವಾಲಾನಯ್ಯ, ಸಾಹಿತ್ಯ ಪರಿಷತ್ತಿನ ಪಾಂಡುರಂಗ, ಮಮ್ತಾಜ್ ಬೇಗಂ, ಶಶಿಕಲಾ, ಸುಮನಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.