ಶುಕ್ರವಾರ, ಅಕ್ಟೋಬರ್ 7, 2022
28 °C

ಅಖಿಲ ಭಾರತ ಜಾನಪದ ಸಮ್ಮೇಳನ ನಡೆಸಲು ಸಿದ್ಧ: ಶಾಸಕ ಡಿ.ಎಸ್.ಸುರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತರೀಕೆರೆ: ಜನವರಿ-ಫೆಬ್ರುವರಿಯಲ್ಲಿ ಅಖಿಲ ಭಾರತ ಜಾನಪದ ಸಮ್ಮೇಳನವನ್ನು ಪಟ್ಟಣದಲ್ಲಿ ನಡೆಸಲು ಸಿದ್ಧ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.

ಪಟ್ಟಣದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ತರೀಕೆರೆ ತಾಲ್ಲೂಕಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ತಜ್ಞ ಡಾ.ದೇ ಜವರೇಗೌಡರ ಬದಕು ಬರಹ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಮ್ಮೇಳನಕ್ಕೆ ಮೈಸೂರು ರಾಜಮನೆತನದ ಯುದುವೀರ ಅವರನ್ನು ಆಹ್ವಾನಿಸಲಾಗುವುದು. ಜಾನಪದ ಕಲಾವಿದರಿಗೆ ವಸತಿ, ಮಾಶಾಸನ ನೀಡಲು ಪ್ರಯತ್ನಿಸಲಾಗುವುದು ಎಂದರು. 

ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಮಾತನಾಡಿ, ‘ಕಂಪ್ಯೂಟರ್ ನಿಂದ ಭಾವನೆ ಮತ್ತು ಭಾಂದವ್ಯ ಕಟ್ಟಲು ಸಾಧ್ಯವಿಲ್ಲ. ಇಂದು ಟಿ.ವಿ ಮಾಧ್ಯಮದಿಂದ ಗ್ರಾಮೀಣ ಭಾಗದ ಜಾನಪದ ಕಲೆಗಳಾದ ಸೋಬಾನೆ ಪದ, ವೀರಗಾಸೆ, ಭಜನೆ ಪದಗಳು ಮೂಲೆಗುಂಪು ಆಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಮೂಲ ಸಂಸ್ಕೃತಿಯನ್ನು ಉಳಿಸುವಲ್ಲಿ ಡಾ.ಜವರೇಗೌಡರು ಅಪಾರವಾಗಿ ಶ್ರಮಿಸಿದರು. ಭಾರತೀಯ ಸಂಸ್ಖತಿಯ ಅಡಿಗಲ್ಲು ಜನಪದ ತರೀಕೆರೆ ಜಾನಪದ ಸಂಸ್ಕೃತಿಯ ಹೆಬ್ಬಾಗಿಲಾಗಿದೆ ಎಂದರು.

ಪತ್ರಕರ್ತ ಎನ್.ರಾಜು, ಪ್ರೊ. ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್. ಆನಂದಪ್ಪ, ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿದರು. ಜಾನಪದ ಪರಿಷತ್ತಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್ ಆರ್., ಲಕ್ಷೀದೇವಮ್ಮ, ಹರೀಶ್ ಕುಡ್ಲೂರು, ತಿಪ್ಪೇಶ್, ಅತ್ತಿಗಟ್ಟೆ ಗುರುನಾಥಗೌಡ, ದೇವರಾಜ್ ಪಿ, ಎಚ್.ನಾಗರಾಜ್, ಸಿ.ವಿ.ರವಿ, ಯೋಗೀಶ್ ,ಆನಂದಕುಮಾರ್, ವಸಂತಕುಮಾರ್, ನವೀನ್ ಪೆನ್ನಯ್ಯ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು