ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ

Published 31 ಮೇ 2023, 16:17 IST
Last Updated 31 ಮೇ 2023, 16:17 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ತರುವೆ ಗ್ರಾಮದ ಮನೆಯೊಂದರ ಬಳಿ ಅಡಗಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸ್ನೇಕ್ ಆರೀಫ್ ಹಿಡಿದು, ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.

ತರುವೆ ಗ್ರಾಮದ ರಾಮಚಂದ್ರ ಅವರ ಮನೆಯ ಬಳಿ ಬುಧವಾರ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತ್ತು. ತಕ್ಷಣ ಬಣಕಲ್‌ನ ಉರಗಪ್ರೇಮಿ ಸ್ನೇಕ್ ಆರೀಫ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಆರೀಫ್ ಹಾವನ್ನು ಸುರಕ್ಷಿತವಾಗಿ ಹಿಡಿದರು.

ಜಾಗೃತೆ ವಹಿಸಿ

ಮಲೆನಾಡಿನ ಭಾಗದ ಉರಗ ಪ್ರೇಮಿಗಳು ಹಾವು ಸಂರಕ್ಷಣೆ ಮಾಡುವಾಗ ಎಚ್ಚರ ವಹಿಸಬೇಕು ಹಾಗೂ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು. ಹಾವುಗಳನ್ನು ಹಿಡಿದು ಹೆಚ್ಚು ಆಡಿಸುವುದನ್ನು ನಿಲ್ಲಿಸಬೇಕು. ಕಳೆದ ಕೆಲವು ವರ್ಷದ ಹಿಂದೆ ಉರಗ ಪ್ರೇಮಿ ಕಳಸದ ಪ್ರಫುಲ್ಲ ದಾಸ್ ಭಟ್, ಈಚೆಗೆ ಚಿಕ್ಕಮಗಳೂರಿನ ಸ್ನೇಕ್ ನರೇಶ್ ಹಾವಿನಿಂದಲೇ ಮೃತರಾಗಿದ್ದಾರೆ. ಹಾವು ಸಂರಕ್ಷಣೆ ಮಾಡುವುದು ಉತ್ತಮ ಕೆಲಸ. ಆದರೆ, ಸಂರಕ್ಷಣೆ ಮಾಡಲು ಹೋಗಿ ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು ಎಂದು ಸಮಾಜ ಸೇವಕ ಸಂಜಯ್ ಗೌಡ ಕೊಟ್ಟಿಗೆಹಾರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT