ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಪ್ರವಾಸೋದ್ಯಮ ನಂಬಿದವರ ಆರ್ಥಿಕ ವಹಿವಾಟು ಕುಸಿತವಾಗಿದೆ.

ಜಿಲ್ಲೆಯ ಮುಳ್ಳಯ್ಯನಗಿರಿ ಸುತ್ತಮುತ್ತ ಹೋಂಸ್ಟೇ ಮತ್ತು ರೆಸಾರ್ಟ್ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೈಮರ, ಮಲ್ಲೇನಹಳ್ಳಿ ರಸ್ತೆಯಲ್ಲಿ ಸಾಗಿದರೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್ಗಳ ಸಂಖ್ಯೆ ಎಣಿಕೆಗೆ ಸಿಗದಷ್ಟಾಗಿವೆ.

ವಾರಾಂತ್ಯ ಮತ್ತು ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಧಾರ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಜನ ಮುಗಿ ಬೀಳುವುದು ಸಾಮಾನ್ಯ. ಲೆಕ್ಕವಿಲ್ಲದಷ್ಟು ವಾಹನಗಳು ಗಿರಿ ಏರಿ ಉಂಟಾಗುತ್ತಿದ್ದ ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರೂ ನರಳುತ್ತಿದ್ದರು.

ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಳ್ಳಯ್ಯನಗಿರ ಪ್ರವಾಸ ನಿರ್ಬಂಧಿಸಿದೆ. ಚಿಕ್ಕಮಗಳೂರು ಎಂದ ಕೂಡಲೇ ಮುಳ್ಳಯ್ಯನಗಿರಿ ಎಂಬುದು ಪ್ರವಾಸಿಗರಲ್ಲಿದೆ. ಮುಳ್ಳಯ್ಯನಗಿರಿ ಪ್ರವಾಸಕ್ಕೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಪ್ರವಾಸಿಗರಲ್ಲಿ ಗೊಂದಲ ಉಂಟಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಾರೆ ಸ್ಥಳೀಯರು.

ಏಕಕಾಲಕ್ಕೆ 600 (ದಿನಕ್ಕೆ 1200) ವಾಹನಗಳಿಗಷ್ಟೇ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಈ ನಿರ್ಧಾರ ಕೈಗೊಂಡ ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಹೋಂಸ್ಟೇ ಮಾಲೀಕರು.

ಇನ್ನು ಟ್ಯಾಕ್ಸಿ, ಜೀಪ್ ಮಾಲೀಕರು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದು, ಬೇರೆ ಪ್ರವಾಸಿಗರಿಗೆ ಬುಕ್ಕಿಂಗ್ಗೆ ಅವಕಾಶ ಇಲ್ಲವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

‘ಆನ್ಲೈನ್ ಬುಕ್ಕಿಂಗ್ ಜಾರಿಗೂ ಮುನ್ನ ಇದ್ದ ಪ್ರವಾಸಿಗರ ಸಂಖ್ಯೆಗೂ ಈಗಿನ ಪ್ರವಾಸಿಗರ ಸಂಖ್ಯೆ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಪ್ರವಾಸಿಗರನ್ನು ನಂಬಿರುವ ನಮಗೆ ಜೀವನವೇ ಕಷ್ಟವಾಗಿದೆ’ ಎಂದು ಗಿರಿಭಾಗದ ಹೋಟೆಲ್ ಮಾಲೀಕರು ಹೇಳುತ್ತಾರೆ.

ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ಸಂಖ್ಯೆ ನಿಯಂತ್ರಿಸಿದರೆ ಇತರೆಡೆಗಳಿಗೆ ಪ್ರವಾಸಿಗರು ಬರಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಆದರೆ, ಇಡೀ ಜಿಲ್ಲೆಗೆ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಎಂದು ಮೂಡಿಗೆರೆ ತಾಲ್ಲೂಕಿನ ಹೋಂಸ್ಟೇ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಲ್ಲಿ ಸಾಫ್ಟವೇರ್ ಉದ್ಯೋಗಿಗಳೇ ಹೆಚ್ಚು. ಅಲ್ಲಿ ಉದ್ಯೋಗ ನಷ್ಟವಾಗುತ್ತಿರುವುದು ಕೂಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಹಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದರೆ, ಉದ್ಯೋಗ ನಷ್ಟದ ಭೀತಿಯಲ್ಲಿ ಬಹಳಷ್ಟು ಜನ ಇದ್ದಾರೆ. ಈ ಎಲ್ಲಾ ಕಾರಣದಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

‘ಆನ್ಲೈನ್ ವ್ಯವಸ್ಥೆಯಿಂದ ನಷ್ಟ’

ಮೂಡಿಗೆರೆ: ಈ ವರ್ಷ ಮೇ ತಿಂಗಳಿನಿಂದಲೇ ಮಳೆಯಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮ ಇತ್ತು. ಇದೀಗ ಮಳೆ ದೂರವಾಗಿದ್ದರೂ ಪ್ರವಾಸೋದ್ಯಮ ಗರಿಗೆದರದಿರುವುದು ಹೋಂ ಸ್ಟೇ ರೆಸಾರ್ಟ್ ಮಾಲೀಕರು ಹಾಗೂ ಅದನ್ನೇ ನಂಬಿರುವ ನೌಕರರನ್ನು ಆತಂಕಕ್ಕೆ ತಳ್ಳಿದೆ. ತಾಲ್ಲೂಕಿನ ಎತ್ತಿನಭುಜಕ್ಕೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಕ್ತ ಪ್ರವೇಶವಿದ್ದಾಗ ಪ್ರವಾಸಿಗರು ನಿತ್ಯವೂ ಭೇಟಿ ನೀಡುತ್ತಿದ್ದರು. ಈಗ ವಾರಾಂತ್ಯದಲ್ಲಿ ಮಾತ್ರ ಪ್ರವಾಸಿಗರಿರುತ್ತಾರೆ. ಬಾಕಿ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಪ್ರವಾಸಿಗರಿಲ್ಲದೇ ಹಲವು ಹೋಂಸ್ಟೇ ರೆಸಾರ್ಟ್ಗಳು ವಾರಂತ್ಯದಲ್ಲೂ ಖಾಲಿ ಹೊಡೆಯುವಂತಾಗಿದೆ. ಜಿಲ್ಲೆಯಲ್ಲಿ ಜಾರಿಗೊಳಿಸಲಾದ ಆನ್ಲೈನ್ ಬುಕ್ಕಿಂಗ್ ನಿರ್ದಿಷ್ಟ ಪ್ರಮಾಣದ ವಾಹನಗಳಿಗೆ ಮಾತ್ರ ಅನುಮತಿ ನೀಡುವ ನಿಯಮಗಳು ಪ್ರವಾಸಿಗರ ಸಂಖ್ಯೆ ಇಳಿಮುಖಕ್ಕೆ ಕಾರಣವಾಗಿದೆ. ಪ್ರವಾಸಿಗರ ಸಂಖ್ಯೆಯ ಇಳಿಮುಖವು ಹೋಂ ಸ್ಟೇ ರೆಸಾರ್ಟ್ ಮಾಲೀಕರಿಗೆ ಮಾತ್ರವಲ್ಲದೆ ಸ್ಥಳೀಯ ತರಕಾರಿ ಮೀನು ಮಾಂಸ ದಿನಸಿ ಅಂಗಡಿಗಳ ವಹಿವಾಟಿಗೂ ಪೆಟ್ಟು ನೀಡಿದೆ. ಪ್ರವಾಸಿಗರನ್ನು ಆಕರ್ಷಿಸಲು ತುರ್ತಾಗಿ ಉತ್ತೇಜನ ನೀಡುವ ಅಗತ್ಯವಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಮೈಸೂರು ಕೊಡಗಿನತ್ತ ಮುಖ

ತರೀಕೆರೆ: ತಾಲ್ಲೂಕಿನಲ್ಲಿರುವ ಕೆಮ್ಮಣ್ಣಗುಂಡಿ ಕಲ್ಲತ್ತಿಗಿರಿ ಹೆಬ್ಬೆ ಜಲಪಾತ ಲಕ್ಕವಳ್ಳಿಯ ಭದ್ರಾ ಅಣೆಕಟ್ಟು ಅಮೃತಾಪುರ ಮೊದಲಾದ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ದತ್ತಪೀಠ ಮುಳ್ಳಯ್ಯನಗಿರಿ ಜತೆಗೆ ಹೆಬ್ಬೆ ಜಲಪಾತ ಕೆಮ್ಮಣಗುಂಡಿ ಕಲ್ಲತ್ತಿಗಿರಿಗೆ ಭೇಟಿ ನೀಡುವುದು ಸಹಜ. ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯಿಂದಾಗಿ ಪ್ರವಾಸಿಗರು ಕೊಡಗು ಮೈಸೂರು ಭಾಗಗಳಿಗೆ ಹೋಗುತ್ತಿದ್ದಾರೆ ಎಂದು ಆ ಭಾಗದ ಜನ ಹೇಳುತ್ತಾರೆ.

ಪ್ರವಾಸಿಗರನ್ನು ನಂಬಿದ ಆರ್ಥಿಕತೆಗೆ ಪೆಟ್ಟು

ಕಳಸ: ವರ್ಷದ ಮೂರು- ನಾಲ್ಕು ತಿಂಗಳು ಪ್ರವಾಸಿಗರಿಂದ ತುಂಬುವ ಕಳಸ ತಾಲ್ಲೂಕಿನಲ್ಲಿ ಈಉದ್ಯಮಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಉಳಿದ 8 ತಿಂಗಳು ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದಂತೆ ಪ್ರವಾಸಿಗರನ್ನು ನಂಬಿದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತದೆ. ತಾಲ್ಲೂಕಿನ ಬಹುತೇಕ ಪ್ರಮುಖ ರಸ್ತೆ ಬದಿಯಲ್ಲೂ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಕಾಫಿ ಶಾಪ್ ರೆಸ್ಟೋರೆಂಟ್ ಮತ್ತು ಮಲೆನಾಡಿನ ಉತ್ಪನ್ನಗಳ ಮಾರಾಟ ಮಳಿಗೆಗಳೂ ತಲೆ ಎತ್ತಿವೆ. ಪ್ರವಾಸಿಗರ ಸಂಖ್ಯೆ ಕಡಿಮೆ ಆಗುವ ಈ ದಿನಗಳಲ್ಲಿ ಈ ವ್ಯವಹಾರಕ್ಕೆ ಕಲ್ಲು ಬೀಳುತ್ತಿದೆ. ರೆಸಾರ್ಟ್ ಮತ್ತು ಹೋಂಸ್ಟೇಗಳು ಖಾಲಿ ಇರುತ್ತವೆ. ತಾಲ್ಲೂಕಿನಲ್ಲಿ ವಿಪರೀತ ಎನ್ನುವಷ್ಟು ಸಂಖ್ಯೆಯಲ್ಲಿ ಅನಧಿಕೃತ ಹೋಂಸ್ಟೇಗಳೂ ತಲೆ ಎತ್ತಿವೆ. ಇದರಿಂದ ಗುಣಮಟ್ಟದ ಹೋಂಸ್ಟೇ ರೆಸಾರ್ಟ್ ಕೂಡ ವಿಪರೀತ ಸ್ಪರ್ಧೆ ಎದುರಿಸುವಂತಾಗಿದೆ. ‘10 ವರ್ಷದ ಹಿಂದೆ ಶೇ 50ರಷ್ಟು ಲಾಭ ಇತ್ತು. ಈಗ ಶೇ 25ರಷ್ಟು ಲಾಭದಲ್ಲಿ ವ್ಯವಹಾರ ಮಾಡುತ್ತಿದ್ದೇವೆ. ಅದರಲ್ಲೂ ಒಟ್ಟು ವ್ಯವಹಾರ ಕಡಿಮೆ ಆಗುತ್ತಿದ್ದು ಲಾಭದ ಪ್ರಮಾಣ ಕಡಿಮೆಯೇ ಆಗುತ್ತಿದೆ. ಜನವರಿಯಿಂದ ಕೆಲವರನ್ನು ಕೆಲಸದಿಂದ ತೆಗೆಯುವ ಸ್ಥಿತಿ ಇದೆ’ ಎಂದು ರೆಸಾರ್ಟ್ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ. ವಾರಾಂತ್ಯದ ಪ್ರವಾಸಿಗರನ್ನು ನಂಬಿಕೊಂಡ ಜೀಪುಗಳ ಮಾಲೀಕರು ಕೂಡ ನಿರೀಕ್ಷಿಸಿದಷ್ಟು ಬಾಡಿಗೆ ಸಿಗದೆ ಸಾಲದ ಕಂತು ಕಟ್ಟಲಾರದೆ ಪರದಾಡುತ್ತಿದ್ದಾರೆ. ಕಳಸ ಪಟ್ಟಣದ ಹೊಟೆಲ್ ವಸತಿ ಗೃಹಗಳು ಕೂಡ ವಾರದ 2 ದಿನ ಮಾತ್ರ ಅಷ್ಟಿಷ್ಟು ವ್ಯಾಪಾರದ ಪದ್ಧತಿಗೆ ಒಗ್ಗಿಕೊಂಡಿದ್ದಾರೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.