ಅನಸೂಯಮ್ಮ ಹಾಗೂ ಹೇಮಲತಾ ಅವರು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
80ರ ದಶಕದ ಚಿತ್ರತಾರೆಯರಾದ ಜಯಂತಿ ಸರಿತಾ ಬಿ.ಸರೋಜಾದೇವಿ ಆರತಿ ಭವ್ಯಾ ವೇದಿಕೆಗೆ ಬಂದಿರುವುದು
ಇದೇ ಮೊದಲ ಬಾರಿಗೆ ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಯುವತಿಯರ ಜೊತೆ ನಾನೂ ಪಾಲ್ಗೊಂಡಿದ್ದು ಮನಸ್ಸಿಗೆ ಖುಷಿ ನೀಡಿತು. ಹಾಡುಗಳು, ನೃತ್ಯ, ಫ್ಯಾಷನ್ ಶೋ ನೋಡಿ ಆನಂದಿಸಿದೆ. ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯಿತು.
– ಸುನಂದಮ್ಮ
ಅಡುಗೆ ಕಾರ್ಯಕ್ರಮ ನನಗೆ ಇಷ್ಟವಾಯಿತು. ಅಡುಗೆ ಮಾಡಿ ಬಹುಮಾನ ಗೆಲ್ಲಬೇಕು ಎಂಬ ಸ್ಫೂರ್ತಿ ಹೆಚ್ಚಾಯಿತು. ಜೊತೆಗೆ ಭರತನಾಟ್ಯ, ಪಾಶ್ಚಾತ್ಯ ನೃತ್ಯಗಳು ಇಷ್ಟವಾದವು.ಮುಂದಿನ ಬಾರಿ ರಸಪ್ರಶ್ನೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆಯಯುವ ವಿಶ್ವಾಸ ಬಂತು
– ಅಂಕಿತಾ
ಮಹಿಳೆಯರಲ್ಲಿ ಇತ್ತೀಚೆಗೆ ಹೃದಯಾಘಾತ ಆಗುತ್ತಿರುವ ಬಗ್ಗೆ ಹೆಚ್ಚು ಭಯವಿತ್ತು. ಹೃದಯ ತಜ್ಞ ಡಾ.ಕಾರ್ತಿಕ್ ಅವರು ಎಲ್ಲಾ ಭಯವನ್ನು ಹೋಗಲಾಡಿಸಿದರು. ಮಹಿಳೆಯರ ಆರೋಗ್ಯದ ಮಾಹಿತಿ ನೀಡಲು ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿತ್ತು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಗಮನ ಸೆಳೆದವು.
– ರೋಹಿಣಿ
ಮಹಿಳೆಯರ ಅಭಿರುಚಿಗೆ ತಕ್ಕ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಆರೋಗ್ಯ ಕಾಳಜಿಯ ಬಗ್ಗೆ ವೈದ್ಯರನ್ನು ಕರೆಸಿ ಉಪನ್ಯಾಸ ಕೊಡಿಸಿದ್ದು ಇಷ್ಟವಾಯಿತು. ಇಂತಹ ಕಾರ್ಯಕ್ರಮಗಳು ಚಿತ್ರದುರ್ಗದಲ್ಲಿ ಮತ್ತೆ ಮತ್ತೆ ನಡೆಯಬೇಕು. ಹೆಚ್ಚು ಮಹಿಳೆಯರು ಪಾಲ್ಗೊಂಡು ಸದುಪಯೋಗ ಪಡೆಯಬೇಕು