ಚಳ್ಳಕೆರೆ: ಭಾದ್ರಪದ ಮಾಸದ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಮೂರ್ನಾಲ್ಕು ದಿನ ‘ಕೃಷಿ ದೈವ’ ಜೋಕುಮಾರಸ್ವಾಮಿ ವಿಶಿಷ್ಟ ಆಚರಣೆ ನಡೆಯುತ್ತಿದೆ. ಮುಂಗಾರು ಮಳೆ ಸುರಿದು ಬರದ ಬವಣೆ ನಿವಾರಣೆಯಾಗಲಿ ಎಂಬ ನಂಬಿಕೆಯಿಂದ ಗ್ರಾಮೀಣ ಭಾಗದ ಜನರು ಜೋಕುಮಾರಸ್ವಾಮಿ ನೆಪದಲ್ಲಿ ಮಳೆರಾಯನನ್ನು ಪೂಜಿಸುವ ಆಚರಣೆಯು ನಡೆಯುತ್ತಿದೆ.

ಜೋಕುಮಾರಸ್ವಾಮಿಯನ್ನು ತಮ್ಮ ಕುಲದೈವ ಎಂದು ನಂಬಿರುವ ದೊಡ್ಡೇರಿ ಗ್ರಾಮದ ಗಂಗಾಮತಸ್ಥ (ಸುಣ್ಣಗಾರ) ಸಮುದಾಯದ ಮಹಿಳೆಯರು ಜೋಕುಮಾರಸ್ವಾಮಿಯನ್ನು ಆರಾಧಿಸುವ ಆಚರಣೆಯಲ್ಲಿ ಪ್ರತಿವರ್ಷ ವಿಶೇಷವಾಗಿ ತೊಡಗಿಸಿಕೊಳ್ಳುತ್ತಾ ಬರುತಿದ್ದಾರೆ.

ನಾಲ್ಕೈದು ಮಹಿಳೆಯರು ಸೇರಿ ಕೆರೆಯ ದಡದಿಂದ ಕಪ್ಪು(ಜೇಡಿ) ಮಣ್ಣು ತಂದು ಹೊಳೆಯುವ ದೊಡ್ಡ ಕಣ್ಣು, ವಿಭೂತಿ, ಹುರಿಕಟ್ಟಾದ ದೊಡ್ಡ ಮೀಸೆ ಮತ್ತು ಬಾಯಿ ಹೊಂದಿದ ಜೋಕುಮಾರಸ್ವಾಮಿಯ ಮೆರೆಮೂರ್ತಿಯನ್ನು ತಯಾರಿಸುತ್ತಾರೆ.

ಕಣ್ಣಿಗೆ ಕವಡೆಯನ್ನು ಚುಚ್ಚಿ ಎದ್ದುಕಾಣುವಂತೆ ಮಾಡುತ್ತಾರೆ. ಸೇವಂತಿಗೆ, ಮಲ್ಲಿಗೆ, ತಂಗಟೆ, ಕನಕಾಂಬರ ಹೀಗೆ ಹಲವು ಬಗೆಯ ಹೂವುಗಳಿಂದ ಬೇವಿನಸೊಪ್ಪಿನಿಂದ ಅಲಂಕರಿಸಿದ ಉತ್ಸವ ಮೂರ್ತಿಯನ್ನು ಬಿದಿರಿನ ಹೊಸ ಬುಟ್ಟಿಯಲ್ಲಿ ಇರಿಸಿ ಅರಿಶಿಣ, ಕುಂಕುಮದಿಂದ ಜೋಕುಮಾರಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ.

ಮೂರ್ತಿಯನ್ನು ಹೊತ್ತು ಜೋಕುಮಾರಸ್ವಾಮಿ, ಮಳೆರಾಯ ದೈವಗಳ ಬಗೆಗೆ ಪದ ಹಾಡಿಕೊಂಡು ಏಳು ದಿನದವರೆಗೆ ಊರೂರು ಅಲೆಯುವುದು ವಾಡಿಕೆ. ಪ್ರತಿ ಮನೆ ಬಳಿ ಹೋಗಿ ಅಂಗಳದಲ್ಲಿ ದೇವರ ಬುಟ್ಟಿ ಇಟ್ಟು ಮಹಿಳೆಯರು ಪದ ಹಾಡುತ್ತಾರೆ.

ಮನೆಯವರು ದೈವದ ಬುಟ್ಟಿಗೆ ನೀರು ಹಾಕಿ ಹೂವು- ಹಣ್ಣು ತಂದು ಊದಿನ ಕಡ್ಡಿ ಹಚ್ಚಿ ವಿಶೇಷ ಪೂಜೆ ಸಲ್ಲಿಸಿ ಜೋಕುಮಾರಸ್ವಾಮಿ ಮೂರ್ತಿಗೆ ಕೈ ಮುಗಿಯುತ್ತಾರೆ. ನಂತರ ರಾಗಿ, ಜೋಳ, ಸಜ್ಜೆ, ಹುಣಸೆಹಣ್ಣು, ಒಣಮೆಣಸಿಕಾಯಿ, ಉಪ್ಪು, ಬೆಲ್ಲ, ಕೊಬ್ಬರಿ ಕೊಟ್ಟು ಕಳುಹಿಸುವ ಪದ್ಧತಿ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತದೆ.

ಜೋಕುಮಾರಸ್ವಾಮಿ ಕೃಷಿದೈವ ಆಗಿರುವ ಕಾರಣ ಮಡಿವಾಳ, ತಳವಾರ, ತೋಟಿಗ, ದಲಿತ ಸೇರಿದಂತೆ ಬಹುತೇಕ ಸಮುದಾಯದವರು ಪೂಜಿಸುತ್ತಾರೆ ಎನ್ನುತ್ತಾರೆ ಗಂಗಾಮತಸ್ಥ ಸಮುದಾಯದ ಮಹಿಳೆಯರಾದ ಪ್ರೇಮಾ ಹಾಗೂ ಆಶಾ.

ಭೂಲೋಕದಲ್ಲಿ ಸಂಚರಿಸಿ ಇಲ್ಲಿನ ಜನ- ಜಾನುವಾರುಗಳ ಕಷ್ಟ ಕಾರ್ಪಣ್ಯಗಳನ್ನು ಗಣೇಶ ಮತ್ತು ಜೋಕುಮಾರಸ್ವಾಮಿ ದೇವಲೋಕಕ್ಕೆ ಕೊಂಡೊಯ್ದು ಮಳೆ ಬರಿಸಲು ನೆರವಾಗುತ್ತಾರೆ. ಜನ -ಜಾನುವಾರುಗಳ ರೋಗ-ರುಜಿನ ಸಂಕಷ್ಟಗಳನ್ನು ಜೋಕುಮಾರ ನಿವಾರಣೆ ಮಾಡುತ್ತಾನೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.