ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಗ್ರಾಮ: ಹೊರಗಿನವರ ಪ್ರವೇಶಕ್ಕೆ ಗ್ರಾಮಸ್ಥರ ತಡೆ

Last Updated 3 ಮೇ 2021, 2:49 IST
ಅಕ್ಷರ ಗಾತ್ರ

ಕಾಪರಹಳ್ಳಿ (ಚಳ್ಳಕೆರೆ): ತಾಲ್ಲೂಕಿನ ಕಾಪರಹಳ್ಳಿ ಗ್ರಾಮದ ಎ.ಕೆ. ಕಾಲೊನಿ ಜನರು ಹೊರಗಿನವರು ಗ್ರಾಮ ಪ್ರವೇಶಿಸದಂತೆ ತಡೆಯಲು ಗ್ರಾಮ ಪ್ರವೇಶ ದ್ವಾರದ ಎರಡೂ ಬದಿಗೆ ಕಟ್ಟಿಗೆ ಗೂಟ ನೆಟ್ಟು, ತೆಂಗಿನ ಹಗ್ಗ ಕಟ್ಟಿ ಮತ್ತು ರಸ್ತೆ ಮಧ್ಯೆ ನೀರು ಪೂರೈಕೆ ಪೈಪ್ ಅಡ್ಡ ಹಾಕಿದ್ದಾರೆ.

ಕೊರೊನಾ ಎರಡನೇ ಅಲೆ ಮತ್ತು ಲಾಕ್‍ಡೌನ್ ಜಾರಿಯಾಗಿರುವ ಕಾರಣ ಜೀವನ ನಿರ್ವಹಣೆಯ ಸಲುವಾಗಿ ಸೊಪ್ಪು, ತರಕಾರಿ, ಹಣ್ಣು ಹಾಗೂ ಇತರ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ಹೇರಿಕೊಂಡು ಗ್ರಾಮವನ್ನು ಪ್ರವೇಶಿಸುತ್ತಿರುವ ವ್ಯಾಪಾರಸ್ಥರು ಹಾಗೂ ನಗರ ಪ್ರದೇಶಗಳಿಂದದ ಮರಳಿ ಬರುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಹೀಗಾಗಿ ಜನರು ಸ್ವಯಂ ಬಂದ್‍ಗೆ ಮುಂದಾಗಿದ್ದಾರೆ.

ದೊಡ್ಡೇರಿ ಗ್ರಾಮ ಪಂಚಾಯಿತಿ ಕೋವಿಡ್ ನಿಯಂತ್ರಣಕ್ಕೆ ಹೊರಗಿನ ಜನರ ಪ್ರವೇಶ ತಡೆಯಲು ಪಂಚಾಯಿತಿ ವ್ಯಾಪ್ತಿಯ ಡಿ. ಉಪ್ಪಾರಹಟ್ಟಿ, ಭರಮಸಾಗರ, ಬೊಮ್ಮಸಮುದ್ರ ಹಾಗೂ ಕೆಂಚವೀರನಹಳ್ಳಿ ಗ್ರಾಮದಲ್ಲಿ ಡಂಗುರು ಹೊಡೆಸಿದೆ ಎನ್ನಲಾಗಿದೆ.

‘ಹೊರಗಿನ ಜನರ ಪ್ರವೇಶ ತಡೆ ಜತೆಗೆ ಜನರ ಅನಗತ್ಯ ಹೋರಾಟವನ್ನು ನಿಯಂತ್ರಿಸದಿದ್ದರೆ ಸೋಂಕು ಹರಡುತ್ತದೆ. ಇದರಿಂದ ಇಡೀ ಗ್ರಾಮದ ಜನರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಸ್ವಯಂ ಪ್ರೇರಣೆಯಿಂದ ಗ್ರಾಮವನ್ನು ಬಂದ್ ಮಾಡಿದ್ದೇವೆ’ ಎನ್ನುತ್ತಾರೆ ಸೋಮನಾಥ್, ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT