ಚಿತ್ರದುರ್ಗ: ಮದುವೆ ಮಾಡಿಸಲಿಲ್ಲ ಎಂದು ಕೋಪಗೊಂಡ ಪುತ್ರನೊಬ್ಬ ತಂದೆಯ ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಸಣ್ಣನಿಂಗಪ್ಪ (65) ಕೊಲೆಯಾದವರು, ಅವರ ಪುತ್ರ ನಿಂಗರಾಜ (35) ಆರೋಪಿ. ಮೊದಲ ಹೆಂಡತಿ ನಿಧನರಾದ ನಂತರ ಸಣ್ಣನಿಂಗಪ್ಪ ಗಿರಿಜಮ್ಮ ಎಂಬುವವರನ್ನು 2ನೇ ಮದುವೆಯಾಗಿದ್ದರು. ಮೊದಲ ಪತ್ನಿಗೆ ಒಬ್ಬ ಮಗ, ಮಗಳು ಇದ್ದು, ಇಬ್ಬರಿಗೂ ವಿವಾಹವಾಗಿದೆ. ನಿಂಗರಾಜು 2ನೇ ಪತ್ನಿಯ ಪುತ್ರ, ಇವರಿಗೆ ವಿವಾಹವಾಗಿರಲಿಲ್ಲ.

ಹೆಣ್ಣು ನೋಡಿ ವಿವಾಹ ನಿಗದಿ ಮಾಡುವಂತೆ ನಿಂಗರಾಜು ತಂದೆಗೆ ಹಲವು ಬಾರಿ ಕೇಳಿಕೊಂಡಿದ್ದರು. ಬುಧವಾರ ರಾತ್ರಿ ಇದೇ ವಿಚಾರವಾಗಿ ತಂದೆ– ಮಗನ ನಡುವೆ ಜಗಳವಾಗಿತ್ತು. ಸಣ್ಣನಿಂಗಪ್ಪ ಮಲಗಿದ ನಂತರ ನಿಂಗರಾಜು ಟ್ರಾಕ್ಟರ್ನ ರಾಬರ್ ರಾಡ್ನಿಂದ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಸಣ್ಣನಿಂಗಪ್ಪ ಅವರ ಪತ್ನಿ ಗಿರಿಜಮ್ಮ ಕೂಡಲೇ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಲೆ ಹಾಗೂ ಕಿವಿಯಲ್ಲಿ ರಕ್ತ ಸೋರಿದ್ದ ಪರಿಣಾಮ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.