ಧರ್ಮಪುರ: ಪಂಚ ಗ್ಯಾರಂಟಿಗಳ ಮಧ್ಯೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಸಮೀಪದ ಅರಳೀಕೆರೆಯಿಂದ ಹೊಸಕೆರೆಗೆ ಹೋಗುವ ಲೋಕೋಪಯೋಗಿ ರಸ್ತೆ ಅಭಿವೃದ್ಧಿ ಮತ್ತು ಮರು ಡಾಂಬರೀಕರಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಧರ್ಮಪುರದಿಂದ ಅರಳೀಕೆರೆ ಮಾರ್ಗವಾಗಿ ಚಳ್ಳಕೆರೆಗೆ ಹೋಗುವ ರಸ್ತೆ ಬಹಳ ದಿನಗಳಿಂದಲೂ ದುರಸ್ತಿಗೆ ಕಾದಿತ್ತು. ಇದರಿಂದ ₹ 30 ಲಕ್ಷ ಅನುದಾನದಡಿ ರಸ್ತೆ ಅಭಿವೃದ್ಧಿ ಮತ್ತು ಮರು ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಹೋಬಳಿಯ ಬಹುತೇಕ ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಧರ್ಮಪುರದಿಂದ ಬೆನಕನಹಳ್ಳಿ ಮತ್ತು ಸಕ್ಕರ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕೆ ₹ 1 ಕೋಟಿ, ಶಿಡ್ಲಯ್ಯನಕೋಟೆಯಿಂದ ರಂಗೇನಹಳ್ಳಿ ಮಾರ್ಗವಾಗಿ ಹುಲಿಕುಂಟೆ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕೆ ₹ 25 ಲಕ್ಷ, ಬೇತೂರು ಮತ್ತು ಬೇತೂರು ಪಾಳ್ಯದಿಂದ ಚಳ್ಳಕೆರೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹ 30 ಲಕ್ಷ, ಧರ್ಮಪುರ ಗೂಳ್ಯ ರಸ್ತೆಯಿಂದ ಚಂದ್ರಗಿರಿಗೆ ಹೋಗುವ ರಸ್ತೆ ಅಭಿವೃದ್ಧಿ ಹಾಗೂ ಮರು ಡಾಂಬರೀಕರಣಕ್ಕೆ ₹ 25 ಲಕ್ಷ, ಹೂವಿನಹೊಳೆಯಿಂದ ಇಕ್ಕನೂರಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನದ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್ ಜಾನ್ ಅಮಾನುಲ್ಲಾ, ಮಾಜಿ ಅಧ್ಯಕ್ಷರಾದ ರಾಘವೇಂದ್ರ, ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಈರಲಿಂಗೇಗೌಡ, ಕೆಡಿಪಿ ಸದಸ್ಯ ತಿಮ್ಮಯ್ಯ, ಎಸ್.ಆರ್.ತಿಪ್ಪೇಸ್ವಾಮಿ, ಎಸ್.ಟಿ.ಕೃಷ್ಣಮೂರ್ತಿ, ಬಸವರಾಜು, ರಂಗನಾಥ, ಶಾರದಮ್ಮ, ಲಕ್ಷ್ಮೀದೇವಿ, ಬಂಡೀ ಈರಣ್ಣ, ತಿಪ್ಪೇಸ್ವಾಮಿ, ಕುಚೇಲಪ್ಪ, ಚಂದ್ರಕುಮಾರ್, ಕರಿಯಾಲಪ್ಪ, ಗುತ್ತಿಗೆದಾರ ಅಶೋಕ್, ಪಿಡಿಒ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.