ಚಳ್ಳಕೆರೆ: ಕೃಷಿ ಪಂಪ್ಸೆಟ್ ಸೋಲಾರ್ ಕಂಪನಿ ವರ್ಗಾವಣೆ ರದ್ದತಿ, ಅಕ್ರಮ-ಸಕ್ರಮ ಕಾನೂನು ಮುಂದುವರಿಕೆ ಹೀಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಸಹಾಯಧನದ ಆಸೆ ತೋರಿಸಿ ಕೃಷಿ ಪಂಪ್ಸೆಟ್ಗಳನ್ನು ಸೋಲಾರ್ ಕಂಪನಿಗೆ ವರ್ಗಾವಣೆ ಮಾಡಿರುವುದು ಖಂಡನೀಯ. ಕೃಷಿ ಕ್ಷೇತ್ರವನ್ನು ಯಾವುದೇ ಕಾರ್ಪೋರೇಟ್ ಕಂಪನಿಗೆ ವರ್ಗಾವಣೆ ಮಾಡುವುದು ಅಕ್ಷಮ್ಯ.
ಕೃಷಿ ಪಂಪ್ಸೆಟ್ ಸೋಲಾರ್ ಕಂಪನಿಗೆ ವರ್ಗಾವಣೆ ಮಾಡುವ ಮೂಲಕ ರೈತ ಸಮುದಾಯವನ್ನು ವಂಚಿಸುತ್ತಿದೆ’ ಎಂದು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ದೂರಿದರು.

‘ಸ್ವಾಮಿನಾಥನ್ ವರದಿ ಆಧರಿಸಿ ರೈತರಿಗೆ ಎಂಎಸ್ಪಿ ಜಾರಿಯಾಗುವವರೆಗೆ ಯಾವುದೇ ಕಾನೂನಗಳನ್ನು ಬದಲಾಯಿಸಬಾರದು. ಕೃಷಿ ಕಾಯ್ದೆ ರದ್ದುಪಡಿಸುವ ಮೂಲಕ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು’ ಎಂದು ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಯರ್ರಿಸ್ವಾಮಿ ಒತ್ತಾಯಿಸಿದರು.

2022-23ನೇ ಸಾಲಿನಲ್ಲಿದ್ದ ಅಕ್ರಮ-ಸಕ್ರಮ ಕಾನೂನು ಅಡಿಯಲ್ಲಿ ರೈತರಿಗೆ ಒದಗಿಸುತ್ತಿದ್ದ ಸೌಲಭ್ಯವನ್ನು ಮುಂದುವರಿಸಬೇಕು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠಮೂರ್ತಿ ಆಗ್ರಹಿಸಿದರು.

ತಹಶೀಲ್ದಾರ್ ರೇಹಾನ್ಪಾಷ ಮನವಿ ಸ್ವೀಕರಿಸಿದರು.

ಸಂಘದ ಸಣ್ಣಪಾಲಯ್ಯ, ಸಿ.ಓಬಯ್ಯ, ರಾಜಣ್ಣ, ತಿಪ್ಪೇಸ್ವಾಮಿ, ಜಿ.ಎಚ್. ಹನುಮಂತಪ್ಪ, ಬೊಮ್ಮಣ್ಣ, ಗೌಡ್ರು ಚಿಕ್ಕಣ್ಣ, ಈರಣ್ಣ, ಕರಿಕೆರೆ ಶಿವಣ್ಣ, ತಿಪ್ಪೇಸ್ವಾಮಿ, ರೈತ ಮಹಿಳೆ ಚಿಕ್ಕಮ್ಮ, ರತ್ನಮ್ಮ, ಶಿವಮ್ಮ, ಲಕ್ಷ್ಮೀದೇವಿ, ಶಿವಕುಮಾರ್, ರಾಜಣ್ಣ, ವೆಂಕಟೇಶ್, ಜಯಣ್ಣ, ಬಂಡೆ ತಿಪ್ಪೇಸ್ವಾಮಿ, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.