ನಾಯಕನಹಟ್ಟಿ: ತುರುವನೂರು, ತಳಕು, ನಾಯಕನಹಟ್ಟಿ ಹೋಬಳಿ ಸೇರಿದಂತೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಶೇಂಗಾ ಬೆಳೆಗೆ ಸುರಳಿ ಪುಚಿ, ಕತ್ತುಕೊಳೆಯಂತಹ ರೋಗಗಳು ಕಾಣಿಸಿಕೊಂಡಿದ್ದು, ಉತ್ತಮವಾದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರನ್ನು ಚಿಂತೆಗೀಡುಮಾಡಿದೆ.

‘ಬಡವರ ಬಾದಮಿ’ ಎಂದೇ ಖ್ಯಾತಿಗಳಿಸಿರುವ ಶೇಂಗಾ ಬಯಲು ಸೀಮೆ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸೇರಿದಂತೆ ಎಂತಹದ್ದೇ ವಾತವರಣವಿದ್ದರೂ ಶೇಂಗಾ ಬೆಳೆ ರೈತರ ಕೈಸೇರುತ್ತದೆ ಎಂಬ ವಾಡಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪದೇಪದೆ ವಾತವರಣದಲ್ಲಿ ಬದಲಾವಣೆ ಮತ್ತು ಸಾಂಪ್ರದಾಯಿಕ ಬೇಸಾಯ ಪದ್ಧತಿಯಿಂದ ರೋಗಗಳು ನಿಯಂತ್ರಣವಾಗದೆ ಶೇಂಗಾಬೆಳೆ, ಹಲವು ರೋಗಗಳಿಗೆ ತುತ್ತಾಗಿ ರೈತರ ನಂಬಿಕೆಯನ್ನು ಹುಸಿಗೊಳಿಸುತ್ತಿದೆ.

ನಾಯಕನಹಟ್ಟಿ, ತಳಕು, ತುರುವನೂರು ಹೋಬಳಿ ವ್ಯಾಪ್ತಿಯ ರೈತರು ಜೂನ್ ಮೊದಲನೇ ವಾರದಿಂದ ಆಗಸ್ಟ್ ಎರಡನೇ ವಾರದವರೆಗೂ ಶೇಂಗಾ ಬಿತ್ತನೆ ಮಾಡಿದ್ದು, ಆಯಾ ಭೂಮಿಗೆ ಅನುಗುಣವಾಗಿ ಫಸಲು ಉತ್ತಮವಾಗಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ಬದಲಾಗುತ್ತಿರುವ ವಾತವರಣದಿಂದ ಶೇಂಗಾ ಬೆಳೆಯಲ್ಲಿ ಸುರಳಿ ಪುಚಿ ರೋಗದಿಂದ ಎಲೆಗಳು ರಂದ್ರವಾಗುತ್ತಿವೆ. ಅಲ್ಲದೆ ಅಲ್ಲಲ್ಲಿ ಚುಕ್ಕಿ, ತಾಮ್ರ, ರೋಗವು ಕಾಣಿಸುತ್ತಿದೆ. ಕಾಂಡದ ಮೇಲ್ಭಾಗದಲ್ಲಿ ಹಸಿರು ಹಾಗೂ ಬಿಳಿ ಪಟ್ಟಿಯ ಹುಳುಗಳು ಬೆಳೆಯ ರಸ ಹೀರುತ್ತಿರುವುದರಿಂದ ಎಲೆಗಳಲ್ಲಿ ತಾಮ್ರ ಬಣ್ಣದ ಚುಕ್ಕಿಗಳು ಕಾಣುತ್ತಿವೆ. ಇದರಿಂದ ಶೇಂಗಾ ಬೆಳೆಯ ಇಳುವರಿಯಲ್ಲಿ ಕುಂಟಿತವಾಗುವ ಸಂಭವ ಹೆಚ್ಚಿದೆ. ಶೇಂಗಾ ಬಿತ್ತನೆಗೆ ಭೂಮಿ ಹದಗೊಳಿಸಿ, ಬಿತ್ತನೆ ಬೀಜ ಖರೀದಿಸಿ, ಬಿತ್ತೆನಕಾರ್ಯ, ಎಡೆಕುಂಟೆ, ಕಳೆ ನಿವಾರಣೆ ಸೇರಿದಂತೆ ಪ್ರತಿ ಎಕರೆಗೆ 30 ರಿಂದ 40ಸಾವಿರ ವ್ಯಯಿಸಿದ್ದು, ಖರ್ಚಾದ ಹಣ ಕೈ ಸೇರುತ್ತದೆಯೋ ಇಲ್ಲವೋ ಎಂಬ ಆತಂಕ ರೈತರಲ್ಲಿದೆ.

ತುರುವನೂರು ಮತ್ತು ನಾಯಕನಹಟ್ಟಿ ಹೋಬಳಿಯ ಹಿರೇಕೆರೆ ಕಾವಲು ಭಾಗದಲ್ಲಿ ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯಗಳು ನಡೆದಿದೆ. ಪ್ರಸ್ತುತ ಶೇಂಗಾ ಬಳ್ಳಿಯಲ್ಲಿ ಕಾಯಿಗಳು ಬಲಿಯುವ ಹಂತವನ್ನು ತಲುಪಿವೆ. ಆದರೆ, ರೋಗಭಾದೆಯಿಂದ ನಲುಗುತ್ತಿರುವ ಶೇಂಗಾಬೆಳೆಯಲ್ಲಿ ಇಳುವರಿ ಕುಂಠಿತವಾಗಲಿದೆ ಎಂದು ಹಿರೇಕೆರೆ ಕಾವಲು ಭಾಗದ ರೈತರರಾದ ಓಬಳೇಶಪ್ಪ, ತುರುವನೂರು ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.

ಹೋಬಳಿಯ ಶೇಂಗಾ ಬೆಳೆಗಾರರು ಮಳೆಯಾಶ್ರಿತ ಪ್ರದೇಶದಲ್ಲಿ ಕಾಲಕಾಲಕ್ಕೆ ಬೆಳೆಯನ್ನು ಬದಲಿಸದೆ ಒಂದೇ ವಿಧವಾದ ಬೆಳೆಯನ್ನು ಹಲವು ವರ್ಷಗಳವರೆಗೂ ಬೆಳೆಯುತ್ತಿರುವುದು ಮತ್ತು ಬಿತ್ತನೆ ಸಮಯದಲ್ಲಿ ಕೃಷಿ ಇಲಾಖೆಯ ಮಾರ್ಗದರ್ಶನದ ಪ್ರಕಾರ ಬೀಜೋಪಚಾರ ಮಾದರಿ ಅನುಸರಿಸದಿರುವುದೇ ಇರುವುದು ಶೇಂಗಾ ಬೆಳೆಗೆ ರೋಗ ಹರಡಲು ಪ್ರಮುಖ ಕಾರಣವಾಗಿದೆ. ಪ್ರಸ್ತುತ ತುರುವನೂರು ಮತ್ತು ನಾಯಕನಹಟ್ಟಿ ಹೋಬಳಿಯಲ್ಲಿ ಕತ್ತುಕೊಳೆ ರೋಗವು ಯತೇಚ್ಛವಾಗಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಜುಲೈ ಎರಡನೇ ವಾರ ಮತ್ತು ಆಗಸ್ಟ್ನಲ್ಲಿ ಬಿತ್ತನೆ ನಡೆಸಿರುವ ಬೆಳೆಗಳಿಗೆ ಸುರುಳಿ ಪುಚಿ(ಬೆಂಕಿರೋಗ) ಕಾಣಿಸಿಕೊಂಡಿದ್ದು, ತಕ್ಷಣವೇ ರೈತರು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ದೊರೆಯುವ ಔಷಧಿಗಳನ್ನು ಪಡೆದು ಬೆಳೆಗಳಿಗೆ ಸಿಂಪಡಿಸಿದರೆ ರೋಗವನ್ನು ಹತೋಟಿಗೆ ತರಬಹುದು ಎಂದು ಕೃಷಿ ಅಧಿಕಾರಿ ಪಿ.ಮಂಜುನಾಥ ಹೇಳುತ್ತಾರೆ.

ಜಮೀನುಗಳನ್ನು ಬೀಳು ಬಿಡಬಾರದು ಎಂದು ಸಾಲಮಾಡಿಕೊಂಡು ಶೇಂಗಾ ಬಿತ್ತನೆ ಮಾಡಲಾಗಿದೆ. ಆದರೆ ರೋಗಗಳು ಕಾಣಿಸಿಕೊಂಡು ಇಳುವರಿ ಕುಂಠಿತವಾಗುವುದು ಖಚಿತ. ಇದರಿಂದ ನಷ್ಟ ಕಟ್ಟಿಟ್ಟಬುತ್ತಿ.
ಟಿ.ಪುರುಷೋತ್ತಮ ಶೇಂಗಾ ಬೆಳೆಗಾರ

ಕತ್ತುಕೊಳೆ ರೋಗ ಆವರಿಸಿ ಶೇಂಗಾಗಿಡದ ಬುಡಕೊಳೆಯುತ್ತಿದೆ. ನಷ್ಟದಲ್ಲಿರುವ ಶೇಂಗಾ ಬೆಳೆಗಾರರಿಗೆ ಸರ್ಕಾರ ಪರಿಹಾರ ಒದಗಿಸಬೇಕು
ಕಿರಣ್ಕುಮಾರ್ ತುರುವನೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.